ಮನೆಗೆ ಹೋಗುತ್ತಿದ್ದ ಶಾಲಾ ಮಕ್ಕಳನ್ನು ಕರೆದು ಜಾಮೂನು ತಿನ್ನಿಸಿದ ಸಚಿವ ಸಂತೋಷ್ ಲಾಡ್

|

Updated on: Jul 12, 2024 | 8:11 PM

ಸಚಿವ ಸಂತೋಷ್ ಲಾಡ್ ಅವರ ಸರಳತೆಯೇ ನಮಗೆ ಇಷ್ಟವಾಗುತ್ತದೆ ಎಂದು ಧಾರವಾಡದ ಜನ ಹೇಳುತ್ತಾರೆ. ವಿರೋಧ ಪಕ್ಷಗಳ ಟೀಕೆಗಳಿಗೆ ಖಡಕ್ಕಾಗಿ ಉತ್ತರ ನೀಡುವ ಲಾಡ್ ಅವರ ಈ ಬಗೆಯ ವ್ಯಕ್ತಿತ್ವ ಸೋಜಿಗ ಮೂಡಿಸದಿರದು. ಪಕ್ಷದ ಕಾರ್ಯಕರ್ತರೊಂದಿಗೂ ಅವರು ಆತ್ಮೀಯತೆಯಿಂದ ವ್ಯವಹರಿಸುತ್ತಾರೆಂಬ ಮಾಹಿತಿ ಇದೆ.

ಧಾರವಾಡ: ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಕ್ತಿತ್ವವೇ ಹಾಗೆ ಮಾರಾಯ್ರೇ! ಹುಬ್ಬಳ್ಳಿ ಆಸ್ಪತ್ರೆಗೆ ತಮ್ಮ ಆಪ್ತರನ್ನು ನೋಡಲು ಬಂದ ಜನರ ಬುತ್ತಿಗಳಿಂದ ರೊಟ್ಟಿ ಇಸಿದುಕೊಂಡು ತಿನ್ನುತ್ತಾರೆ, ಧಾರವಾಡದಲ್ಲಿ ಹೋಟೆಲೊಂದು ರಷ್ ಇದ್ದ ಕಾರಣ ಅದರ ಮೆಟ್ಟಿಲುಗಳ ಮೇಲೆ ಕೂತು ಕಾಫಿ ಹೀರುತ್ತಾರೆ! ತಾನೊಬ್ಬ ಸಚಿವ ಎಂಬ ಹಮ್ಮು ಅವರು ತೋರಲ್ಲ. ಇವತ್ತು ಅವರು ನಗರದ ಒಂದು ಖ್ಯಾತ ಹೋಟೆಲ್ ಗೆ ಹೋದಾಗ ಅದು ಜನನಿಬಿಡವಾಗಿದ್ದ ಕಾರಣ ಮೆಟ್ಟಿಲುಗಳ ಮೇಲೆ ಕೂತು ಬಿಡುತ್ತಾರೆ, ಸಚಿವನೇ ಕೂತ ಮೇಲೆ ಜೊತೆಗಿರೋರು ಕೂರದಿರುತ್ತಾಯೇ? ಅದು ಸರಿ, ಅವರು ಕಾಫಿ ಕುಡಿಯುತ್ತಿರುವಾಗ ರಸ್ತೆ ಮೇಲೆ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ 4-5 ಬಾಲಕಿಯರು ಕಾಣಿಸುತ್ತಾರೆ. ಕೂಡಲೇ ಅವರನ್ನು ತಮ್ಮಲ್ಲಿಗೆ ಕರೆಯುವ ಲಾಡ್, ಅವರಿಗೆ ಜಾಮೂನು ತಿನ್ನಿಸುತ್ತಾರೆ ಮತ್ತು ಒಳಗಡೆ ಹೋಗಿ ದೋಸೆ ತಿನ್ನಲು ಹೇಳುತ್ತಾರೆ. ಅವರೊಂದಿಗಹೆ ಸೆಲ್ಫೀ ಕೂಡ ತೆಗೆದುಕೊಳ್ಳುತ್ತಾರೆ. ಅವರನ್ನು ಹೋಟೆಲ್ ಮುಂದೆ ನೋಡುವ ಜನ ಅವರಲ್ಲಿಗೆ ಬಂದು ಮಾತಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸುಪ್ರೀಂ ಸೂಚಿಸಿದ ಸ್ಥಳದಲ್ಲಿ ರಾಮಮಂದಿರ ಕಟ್ಟಿಲ್ಲ: ಸಂತೋಷ್ ಲಾಡ್ ಹೇಳಿಕೆಗೆ ಈಶ್ವರಪ್ಪ ತಿರುಗೇಟು