ಶುಕ್ರವಾರ ಸಂಜೆ ಬೆಂಗಳೂರು ನಗರದಲ್ಲಿ ಜೋರು ಗಾಳಿ ಸಹಿತ ಧಾರಾಕಾರ ಮಳೆ!
ನಗರದಲ್ಲಿ ಮಳೆ ಸುರಿಯಲಾರಂಭಿಸಿದರೆ ಸೃಷ್ಟಿಯಾಗುವ ಅವಾಂತರ ಬೇರೆ ದೇಶಗಳ ಜನರಿಗೂ ಗೊತ್ತು. ಉಪ ಮುಖ್ಯಮಂತ್ರಿ ಎರಡೆರಡು ಸಲ ಮತ್ತು ಒಮ್ಮೆ ಮುಖ್ಯಮಂತ್ರಿ ನಗರ ಪ್ರದಕ್ಷಿಣೆ ಹಾಕಿದ್ದಾಯಿತು. ಅದರಿಂದ ಏನಾದರೂ ಉಪಯೋಗವಾಯಿತೇ? ಗಣ್ಯರೇ ಹೇಳಬೇಕು. ಇವತ್ತು ಸುರಿದಿದ್ದು ಭಾರೀ ಜೋರು ಮಳೆಯೇನಲ್ಲ, ಮುಂದಿನ ದಿನಗಳಲ್ಲಿ ಮಳೆ ಸುರಿಯುವ ಪ್ರಮಾಣ ಹೆಚ್ಚಲಿದೆ
ಬೆಂಗಳೂರು: ಹಲವು ದಿನಗಳಿಂದ ನಗರದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆ ಶುಕ್ರವಾರ ಸಂಜೆ ಧೋ ಅಂತ ಸುರಿಯಲಾರಂಭಿಸಿತು. ಕೋರ್ಟು ಕಚೇರಿಗಳಿಗೆ ಹೋಗುವ ಜನ ತಮ್ಮ ಕೆಲಸಗಳನ್ನು ಮುಗಿಸಿ ಮನೆಗಳಿಗೆ ಹೋಗಬೇಕೆನ್ನುವಾಗಲೇ ಮಳೆರಾಯ ಧರೆಗಿಳಿಯುವುದು ಆರಂಭಿಸಿದ. ನಗರದ ನಾನಾ ಕಡೆಗಳಲ್ಲಿ ಜೋರು ಗಾಳಿ ಸಹಿತ ಭರ್ಜರಿ ಮಳೆ. ನಗರರ ಹಲವಾರು ರಸ್ತೆಗಳು ಜಲಾವೃತಗೊಂಡಿದ್ದವು ಮತ್ತು ನೀರು ತಗ್ಗು ಪ್ರದೇಶಗಳ ಕಡೆ ರಭಸವಾಗಿ ಹರಿಯುತ್ತಿತ್ತು. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಡಬಲ್ ರೋಡ್, ಶಾಂತಿ ನಗರ, ವಿಧಾನಸೌದ, ಕೆಆರ್ ಮಾರ್ಕೆಟ್, ಕಬ್ಬನ್ ಪಾರ್ಕ್, ರಾಜಾಜಿನಗರ, ವಿಜಯನಗರ, ನಗರದ ದಕ್ಷಿಣ ಭಾಗದಲ್ಲಿ ಜಯನಗರ, ಜೆಪಿ ನಗರ, ಬನಶಂಕರಿ ಮೊದಲಾದ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಈ ಪ್ರದೇಶಗಳಲ್ಲಿರುವ ಫ್ಲೈ ಓವರ್ಗಳ ಕೆಳಗೆ ದ್ವಿಚಕ್ರ ವಾಹನ ಸವಾರರು ಆಶ್ರಯ ಪಡೆದಿದ್ದು ಸಾಮಾನ್ಯ ದೃಶ್ಯವಾಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿ: ವಾರದ ಮಳೆ ಹೊಡೆತಕ್ಕೆ ನಲುಗಿದ ಕೃಷ್ಣಾ ನದಿ ಪಾತ್ರದ ರೈತರು; ಕಷ್ಟಪಟ್ಟು ಬೆಳೆದ ಬೆಳೆ ನೀರುಪಾಲು