AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ವಾರದ ಮಳೆ ಹೊಡೆತಕ್ಕೆ ನಲುಗಿದ ಕೃಷ್ಣಾ ನದಿ ಪಾತ್ರದ ರೈತರು; ಕಷ್ಟಪಟ್ಟು ಬೆಳೆದ ಬೆಳೆ ನೀರುಪಾಲು

ಪಶ್ಚಿಮ ಘಟ್ಟ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೊಂಚ ಮಳೆ ತಗ್ಗಿದರೂ ನದಿ ಪಾತ್ರದಲ್ಲಿ ಅದರ ಎಫೆಕ್ಟ್ ಮಾತ್ರ ಕಮ್ಮಿ ಆಗುತ್ತಿಲ್ಲ. ಒಂದೇ ವಾರದ ಮಳೆ ಹೊಡೆತಕ್ಕೆ ನದಿ ಅಕ್ಕಪಕ್ಕದ ರೈತರು ನಲುಗಿ ಹೋಗಿದ್ದಾರೆ. ಇತ್ತ ನದಿಯಲ್ಲಿ ಅದೊಂದು ಬಳ್ಳಿ ತೇಲಿ ಬರ್ತಿದ್ದು, ಇದರಿಂದ ಆತಂಕ ಎದುರಾಗಿದೆ. ಅಷ್ಟಕ್ಕೂ ಹೇಗಿದೆ ನದಿ ಪಾತ್ರದಲ್ಲಿ ರೈತರ ಪರಿಸ್ಥಿತಿ ಅಂತೀರಾ? ಈ ಸ್ಟೋರಿ ಓದಿ.

ಬೆಳಗಾವಿ: ವಾರದ ಮಳೆ ಹೊಡೆತಕ್ಕೆ ನಲುಗಿದ ಕೃಷ್ಣಾ ನದಿ ಪಾತ್ರದ ರೈತರು; ಕಷ್ಟಪಟ್ಟು ಬೆಳೆದ ಬೆಳೆ ನೀರುಪಾಲು
ಮಳೆ ಹೊಡೆತಕ್ಕೆ ನಲುಗಿದ ಕೃಷ್ಣಾ ನದಿ ಪಾತ್ರದ ರೈತರು
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 12, 2024 | 8:40 PM

Share

ಬೆಳಗಾವಿ, ಜು.12: ಜಿಲ್ಲೆಯ ಚಿಕ್ಕೋಡಿ(Chikkodi) ತಾಲೂಕಿನ ಕಲ್ಲೋಳ, ಮಲ್ಲಿಕವಾಡ, ಯಡೂರ, ಬಾವನಸೌದತ್ತಿ ಗ್ರಾಮದ ಬಳಿ ಕೃಷ್ಣಾ ನದಿ ನೀರು, ತನ್ನ ಒಡಲು ಬಿಟ್ಟು ಹೊರಗೆ ಬಂದು ಜಮೀನುಗಳಿಗೆ ನುಗ್ಗಿದೆ. ಕಳೆದ ಒಂದು ವಾರದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಒಂದು ವಾರವಂತೂ 75 ಸಾವಿರ ಕ್ಯೂಸೆಕ್​ವರೆಗೂ ಒಳ ಹರಿವು ಬಂದಿದೆ. ಇದೀಗ ಮಳೆ ಅಬ್ಬರ ಕೊಂಚ ತಗ್ಗಿದ್ದು, 53 ಸಾವಿರ ಕ್ಯೂಸೆಕ್ ಒಳ ಹರಿವಿದೆ. ಇತ್ತ ಜಲಾವೃತವಾಗಿದ್ದು ಐದು ಸಂಪರ್ಕ ಸೇತುವೆಗಳು ಕೂಡ ಇದೀಗ ಓಪನ್ ಆಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ನದಿ ಅಕ್ಕಪಕ್ಕದ ಜಮೀನಿನ ರೈತರು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತೇಲಿ ಬರ್ತಿದೆ ನೀರ್ ಬಳ್ಳಿ

ಮಳೆಗೆ ನದಿ ತನ್ನ ಪಾತ್ರ ಬಿಟ್ಟು ಹೊರಗೆ ನುಗ್ಗಿದ್ದರಿಂದ ನದಿ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ರೈತರಿದ್ದಾರೆ. ಅದರಲ್ಲೂ ಹೆಚ್ಚಾಗಿ ಕಬ್ಬು, ಮೆಕ್ಕೆಜೋಳ, ಸೊಯಾಬಿನ್ ಬೆಳೆ ಮುಳುಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನು ಚಿಕ್ಕೋಡಿ ತಾಲೂಕಿನ ಮಾಂಜರಿ ಬಳಿ ಅಪಾರ ಪ್ರಮಾಣದಲ್ಲಿ ನೀರ್ ಬಳ್ಳಿ ತೇಲಿ ಬಂದು ನಿಂತಿದೆ. ಇದೇ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರ್ ಬಳ್ಳಿ ಹರಿದು ಬರ್ತಿದ್ದು, ಈ ಬಳ್ಳಿ ಇದ್ದ ನೀರು ಉಪಯೋಗಿಸಿದರೆ ಚರ್ಮ ರೋಗ ಮತ್ತು ವಾಂತಿಬೇಧಿ ಆಗುತ್ತಂತೆ.

ಇದನ್ನೂ ಓದಿ:ಬೀದರ್​: ಭಾರೀ ಮಳೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ನೀರುಪಾಲು; ರೈತರಲ್ಲಿ ಹೆಚ್ಚಿದ ಆತಂಕ

ಇತ್ತ ಈ ನೀರು ಜಾನುವಾರುಗಳು ಕುಡಿದರೆ, ಅವುಗಳ ಆರೋಗ್ಯದ ಮೇಲೆ ಕೂಡ ಸಮಸ್ಯೆ ಆಗಲಿದೆಯಂತೆ. ನೀರ್ ಬಳ್ಳಿಯನ್ನ ಕೂಡಲೇ ಅಧಿಕಾರಿಗಳು ತೆರವು ಮಾಡಬೇಕು. ಜೊತೆಗೆ ನದಿಯ ನೀರು ಪಿಲ್ಟರ್ ಮಾಡಿ ಕೊಡುವಂತೆ ಸ್ಥಳೀಯ ರೈತರು ಒತ್ತಾಯ ಮಾಡಿದ್ದಾರೆ. ಇದರ ಜೊತೆಗೆ ನದಿ ನೀರು ಬಳಸುವವರೂ ಎಚ್ಚರಿಕೆಯಿಂದ ಬಳಸಿ, ಕಾಯಿಸಿ ನೀರು ಕುಡಿಯುವಂತೆ ಮನವಿ ಮಾಡಿದ್ದಾರೆ.

ಸದ್ಯ ಮತ್ತೆ ಇಂದಿನಿಂದ ಮಳೆ ಶುರುವಾಗಿದೆ. ಮೂರ್ನಾಲ್ಕು ದಿನ ಶಾಂತವಾಗಿದ್ದ ಮಳೆರಾಯ ಮತ್ತೆ ತನ್ನ ಕೆಲಸ ಶುರು ಮಾಡಿದ್ದಾನೆ. ಹೀಗೆ ಮಳೆ ಆದರೆ ನದಿ ಪಾತ್ರದಲ್ಲಿ ಜಮೀನು ಮುಳುಗುವುದಷ್ಟೇ ಅಲ್ಲದೇ ಊರುಗಳಿಗೂ ನದಿ ನೀರು ನುಗ್ಗಿ ಅನಾಹುತ ಸೃಷ್ಟಿಸುವ ಆತಂಕ ಜನರಲ್ಲಿದೆ. ಈಗ ಮುಳುಗಿದ ಬೆಳೆ ಕಳೆದುಕೊಳ್ಳುವ ಆತಂಕ ಇದ್ದು, ಸರ್ಕಾರ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಗಮನ ಹರಿಸಲಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ