ಅಪೆಕ್ಸ್ ಬ್ಯಾಂಕಲ್ಲಿ ಹಗರಣ ನಡೆದಿದ್ದರೆ ಸರ್ಕಾರ ಗಮನ ಹರಿಸುತ್ತದೆ: ಸತೀಶ್ ಜಾರಕಿಹೊಳಿ

ಅಪೆಕ್ಸ್ ಬ್ಯಾಂಕಲ್ಲಿ ಹಗರಣ ನಡೆದಿದ್ದರೆ ಸರ್ಕಾರ ಗಮನ ಹರಿಸುತ್ತದೆ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2024 | 5:21 PM

ಹೆಚ್ಚುವರಿ ಉಪ ಮುಖ್ಯಮಂತ್ರಿಗಳು ಬೇಕೆಂದು ಪದೇಪದೆ ಹೇಳುತ್ತಾ ಸುದ್ದಿಯಲ್ಲಿರುತ್ತಿದ್ದ ಸಚಿವ ರಾಜಣ್ಣ ಇನ್ನು ಮುಂದೆ ತನಗೆ ಹಿತವಲ್ಲದ ವಿಷಯಗಳಿಗಾಗಿ ಸುದ್ದಿಯಲ್ಲಿರಬೇಕಾದ ಸಮಯ ಎದುರಾಗಲಿದೆ. ಹಾಗಾದರೆ ಅವರಿಗೆ ಹಗರಣ ಬೆಳಕಿಗೆ ಬರುವ ವಿಷಯ ಮೊದಲೇ ಗೊತ್ತಿತ್ತು ಅನಿಸುತ್ತದೆ, ವಿಷಯಾಂತರ ಮಾಡಲು ಬೇರೆ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರೇ?

ಚಿಕ್ಕೋಡಿ: ಸಹಕಾರ ಸಚಿವ ಕೆಎನ್ ರಾಜಣ್ಣ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿದ್ದಾಗ ಸಾವಿರಾರು ಕೋಟಿ ರೂ. ಗಳ ಅವ್ಯವಹಾರ ನಡೆದಿರೋದು ಅರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಚಿಕ್ಕೋಡಿಯಲ್ಲಿ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪ್ರತಿಕ್ರಿಯೆ ಕೇಳಿದರೆ ಅವರು ಅದು ತನಗೆ ಸಂಬಂಧಿಸದ ವಿಷಯ ಎನ್ನುವ ಅರ್ಥದಲ್ಲಿ ಮಾತಾಡಿದರು. ಹಗರಣ ನಡೆದಿದ್ದೇಯಾದರೆ ಅದರ ಕಡೆ ಗಮನ ಹರಿಸಲು ಸರ್ಕಾರವಿದೆ, ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿದ್ದಾರೆ, ತಾನು ಮಾತಾಡುವುದು ತಪ್ಪಾಗುತ್ತದೆ ಎಂದು ಹೇಳಿದರು. ಈ ಆರೋಪ ನಿಜವಾಗಿದ್ದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕಷ್ಟಗಳ ಸರಮಾಲೆ ಶುರುವಾಗಿದ್ದು ಖಚಿತವಾಗುತ್ತದೆ ಮತ್ತು ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಚಿವರೆಲ್ಲ ವಿರೋಧ ಪಕ್ಷದ ನಾಯಕರಿಂದ ಬೌನ್ಸರ್ ಮತ್ತು ಯಾರ್ಕರ್ ಗಳನ್ನು ಎದುರಿಸಲು ಸಿದ್ಧರಾಗಿಯೇ ವಿಧಾನ ಸೌಧಕ್ಕೆ ಬರಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಹಕಾರ ಸಚಿವ ಕೆಎನ್ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರಂತೆ!