Puneeth Rajkumar: ‘ಪುನೀತ್ ಫೋಟೋ ಇಲ್ಲಿ ಇರಬಾರದು’: ಕೂಗಾಡಿದ ಮಹಿಳೆ; ವಿಡಿಯೋ ವೈರಲ್
Puneeth Rajkumar | Kannada Flag: ಮಹಿಳೆಯ ವರ್ತನೆಗೆ ಅಪ್ಪು ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆಕೆ ಕ್ಷಮೆ ಕೇಳಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.
ಕರುನಾಡಿನ ಧ್ವಜದಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಫೋಟೋ ಹಾಕಿ ಫ್ಯಾನ್ಸ್ ಗೌರವ ಸಲ್ಲಿಸುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಈ ಬಾವುಟ ರಾರಾಜಿಸುತ್ತಿದೆ. ಆದರೆ ಈ ರೀತಿ ಕನ್ನಡದ ಬಾವುಟದಲ್ಲಿ (Kannada Flag) ಪುನೀತ್ ಅವರ ಫೋಟೋ ಹಾಕಿದ್ದನ್ನು ಮಹಿಳೆಯೊಬ್ಬರು ಬೆಂಗಳೂರಿನ ಮಲ್ಲೇಶ್ವರದಲ್ಲಿ ವಿರೋಧಿಸಿದ್ದಾರೆ. ‘ಪುನೀತ್ ಅಂದ್ರೆ ಕನ್ನಡಾಂಬೆ ಅಲ್ಲ. ಪುನೀತನ ಚಿತ್ರ ಬಾವುಟದಲ್ಲಿ ಬರಬಾರದು’ ಎಂದು ಮಹಿಳೆಯು ಕೂಗಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ವರ್ತನೆಯನ್ನು ಅಪ್ಪು ಅಭಿಮಾನಿಗಳು (Puneeth Rajkumar Fans) ವಿರೋಧಿಸಿದ್ದಾರೆ. ಆಕೆ ಕ್ಷಮೆ ಕೇಳಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 03, 2022 08:50 PM