ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಮೂಲ, ಹಿನ್ನೆಲೆ ಏನ್ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ಚಿನ್ನದ ನಿಧಿ (Gold Treasure) ಪತ್ತೆಯಾಗಿ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಸರ್ಕಾರ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ (Excavation) ಶುರುಮಾಡಿದೆ. ಸುಮಾರು ಐದು ದಿನಗಳಿಂದ ಲಕ್ಕುಂಡಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ ಪುರಾತನ ವಸ್ತುಗಳು (Antiquities) ಪತ್ತೆಯಾಗಿವೆ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿ ತಿಳಿದುಬಂದಿದೆ. ಗ್ರಾಮದಲ್ಲಿರುವ ಮನೆಯೊಳಗೊಂದು ಐತಿಹಾಸಿಕ ದೇವಸ್ಥಾನ ಪತ್ತೆಯಾಗಿದ್ದು, ಹೊರಗೆ ನೋಡಿದ್ರೆ ಮನೆ ಒಳಗೆ ಹೋದ್ರೆ ದೇಗುಲ. ಹೌದು.... ಚೌಕಿಮಠ ಮನೆತನದ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನವಿದೆ. ಈ ಪುರಾತನ ದೇಗುಲವನ್ನು ಪರಿಶೀಲನೆ ನಡೆಸಿರುವ ಇತಿಹಾಸಕಾರರು ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಹೇಳಿದ್ದಾರೆ. ಹೀಗಾಗಿ ಚೌಕಿಮಠ ಕುಟುಂಬಕ್ಕೆ ಮನೆ ಖಾಲಿ ಮಾಡುವ ಸ್ಥಿತಿ ಎದುರಾಗಿದ್ದು. 15 ಮನೆಗಳು ನಿರ್ಮಾಣ ಮಾಡಿ ಕೊಡಬೇಕು, ಜೊತೆಗೆ ಪರಿಹಾರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಗದಗ, (ಫೆಬ್ರವರಿ 06) : ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ಚಿನ್ನದ ನಿಧಿ (Gold Treasure) ಪತ್ತೆಯಾಗಿ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಸರ್ಕಾರ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ (Excavation) ಶುರುಮಾಡಿದೆ. ಸುಮಾರು ಐದು ದಿನಗಳಿಂದ ಲಕ್ಕುಂಡಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ ಪುರಾತನ ವಸ್ತುಗಳು (Antiquities) ಪತ್ತೆಯಾಗಿವೆ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿ ತಿಳಿದುಬಂದಿದೆ. ಗ್ರಾಮದಲ್ಲಿರುವ ಮನೆಯೊಳಗೊಂದು ಐತಿಹಾಸಿಕ ದೇವಸ್ಥಾನ ಪತ್ತೆಯಾಗಿದ್ದು, ಹೊರಗೆ ನೋಡಿದ್ರೆ ಮನೆ ಒಳಗೆ ಹೋದ್ರೆ ದೇಗುಲ. ಹೌದು…. ಚೌಕಿಮಠ ಮನೆತನದ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನವಿದೆ. ಈ ಪುರಾತನ ದೇಗುಲವನ್ನು ಪರಿಶೀಲನೆ ನಡೆಸಿರುವ ಇತಿಹಾಸಕಾರರು ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಹೇಳಿದ್ದಾರೆ. ಹೀಗಾಗಿ ಚೌಕಿಮಠ ಕುಟುಂಬಕ್ಕೆ ಮನೆ ಖಾಲಿ ಮಾಡುವ ಸ್ಥಿತಿ ಎದುರಾಗಿದ್ದು. 15 ಮನೆಗಳು ನಿರ್ಮಾಣ ಮಾಡಿ ಕೊಡಬೇಕು, ಜೊತೆಗೆ ಪರಿಹಾರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಟಿವಿ9ಗೆ ಚೌಕಿಮಠ ಕುಟುಂಬ ಸದಸ್ಯರು ಪ್ರತಿಕ್ರಿಯಿಸಿದ್ದು, 15 ಮನೆಗಳು ನಿರ್ಮಾಣ ಮಾಡಿ ಕೊಡಬೇಕು. ಜೊತೆಗೆ ಪರಿಹಾರ ನೀಡಬೇಕು. ಇಲ್ಲಾಂದ್ರೆ ನಾವು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ. ಇನ್ನೂ ನಮ್ಮ ಕುಟುಂಬದ ಜೊತೆ ಯಾವ ಅಧಿಕಾರಿಗಳು ಮಾತನಾಡಿಲ್ಲ.. ಭೂಮಿ ಪೂಜೆ ಕಾರ್ಯಕ್ರಮ ಮಾಡ್ತೀವಿ ಅಂದ್ರು, ಅವಕಾಶ ಕೊಟ್ಟಿದ್ದೇವೆ.ಈಶ್ವರ ದೇವಸ್ಥಾನ ಸಂಕೀರ್ಣದಲ್ಲಿ ಒಟ್ಟು 15 ಕುಟುಂಬಸ್ಥರು ಇದ್ದೇವೆ. ನಮಗೆ ಈ ಜಾಗ ಬಿಟ್ರೆ ಬೇರೆ ಏನೂ ಇಲ್ಲ. ಹೂವು ಕಟ್ಟಿ ಜೀವನ ಮಾಡಬೇಕು. ಬಡ ಕುಟುಂಬಗಳೇ ಇಲ್ಲಿ ವಾಸವಾಗಿದ್ದಾರೆ. ಹೀಗಾಗಿ ಸರ್ಕಾರ ನಮ್ಮ 15 ಕುಟುಂಬಗಳಿಗೆ ನಿವೇಶನ ಜೊತೆಗೆ ಮನೆಗಳ ನಿರ್ಮಾಣ ಮಾಡಿ ಕೊಡಬೇಕು. ಲಕ್ಕುಂಡಿ ಇತಿಹಾಸ ಉಳಿಯಬೇಕು, ಮುಂದಿನ ಪೀಳಿಗೆಗೆ ಗೋತ್ತಾಗಬೇಕು. ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತೆ. ಆದ್ರೆ, ನಮಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು . ಅಂದಾಗ ಮಾತ್ರ ಬಿಟ್ಟು ಕೊಡ್ತೀವಿ. ಇಲ್ಲಂದ್ರೆ ಬಿಟ್ಟುಕೊಡಲ್ಲ ಎಂದು ಸ್ಪಷ್ಟಪಡಿಸಿದರು.
