ಗದಗದಲ್ಲಿ ಚಿನ್ನದ ನಿಧಿ: ಲಕ್ಕುಂಡಿಯ ಈ ಸ್ಥಳದಲ್ಲಿ ಇಂದಿಗೂ ಸಿಗುತ್ತದೆ ಚಿನ್ನ, ರತ್ನ, ಹವಳ
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನ, ಮುತ್ತು, ರತ್ನಗಳು ಸಿಗುವ ಬಗ್ಗೆ ಬಸಪ್ಪ ಬಡಿಗೇರ ಅವರು ವಿವರಿಸಿದ್ದಾರೆ. ಯುದ್ಧ ಭೂಮಿಗಳಲ್ಲಿ ಮಡಿದವರ ವಸ್ತುಗಳು ದೊರೆಯುತ್ತವೆ ಎಂಬುದು ಅವರ ಅನಿಸಿಕೆ. ನಿಧಿ ಸಿಕ್ಕವರ ಮನೆಯಲ್ಲಿ ದುರಂತ ಸಂಭವಿಸುತ್ತದೆ ಎಂಬ ನಂಬಿಕೆಯಿದೆ. ಸರ್ಕಾರಕ್ಕೆ ಒಪ್ಪಿಸುವುದು ಉತ್ತಮ ಎಂದು ಬಡಿಗೇರ ಅಭಿಪ್ರಾಯಪಟ್ಟಿದ್ದಾರೆ.
ಗದಗ, ಜ.14: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವು ಪುರಾತನ ಕಾಲದ ನಿಧಿಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಲಕ್ಕುಂಡಿಯಲ್ಲಿ ಚಿನ್ನ ಪತ್ತೆಯಾದ ನಂತರ ಇಲ್ಲಿನ ಇನ್ನು ಇಂತಹ ಚಿನ್ನ ಸಿಗುವ ಸ್ಥಳಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದೀಗ ಲಕ್ಕುಂಡಿಯ ನಿಧಿಗಳ ಬಗ್ಗೆ ಸ್ಥಳೀಯರಾದ ಬಸಪ್ಪ ಬಡಿಗೇರ ಅವರು ಟಿವಿ9 ಕನ್ನಡಕ್ಕೆ ಹಲವು ಆಸಕ್ತಿದಾಯಕ ಮಾಹಿತಿಗಳನ್ನು ನೀಡಿದ್ದಾರೆ. ಬಸಪ್ಪ ಬಡಿಗೇರರ ಪ್ರಕಾರ, ಲಕ್ಕುಂಡಿಯಲ್ಲಿ ಮುತ್ತು, ರತ್ನ, ಹವಳಗಳಲ್ಲದೆ ಚಿನ್ನವೂ ದೊರೆಯುತ್ತದೆ. ರಾಜಮಹಾರಾಜರ ಕಾಲದಲ್ಲಿ ನಡೆದ ಭೀಕರ ಯುದ್ಧಗಳಲ್ಲಿ ಮಡಿದವರ ದೇಹದ ಮೇಲಿದ್ದ ಅಮೂಲ್ಯ ವಸ್ತುಗಳು ಈ ಪ್ರದೇಶದಲ್ಲಿ ಇಂದಿಗೂ ದೊರೆಯುತ್ತಿವೆ. ಜಮೀನುಗಳಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ಈ ವಸ್ತುಗಳು ಹೆಚ್ಚಾಗಿ ಸಿಗುತ್ತವೆ ಎಂದು ಅವರು ತಿಳಿಸಿದ್ದಾರೆ. ಒಂದು ಕಾಲದಲ್ಲಿ ಗ್ರಾಮದ ಒಣಗೇರಿ ಮನೆಯಲ್ಲಿ ಒಂದು ರಾಜ ಕಿರೀಟವೂ ಸಿಕ್ಕಿತ್ತು ಎಂಬ ಸಂಗತಿಯನ್ನು ಬಡಿಗೇರ ನೆನಪಿಸಿಕೊಂಡಿದ್ದಾರೆ. ಲಕ್ಕುಂಡಿಯಲ್ಲಿ ದೊರೆತ ಇಂತಹ ನಿಧಿಗಳನ್ನು ತಮ್ಮ ಬಳಿ ಇಟ್ಟುಕೊಂಡವರಿಗೆ ದುರಂತಗಳು ಸಂಭವಿಸುತ್ತವೆ ಎಂಬ ಸ್ಥಳೀಯ ನಂಬಿಕೆಯನ್ನೂ ಅವರು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಿಕ್ಕ ಚಿನ್ನವನ್ನು ಸರ್ಕಾರಕ್ಕೆ ಒಪ್ಪಿಸಿದ್ದು ಒಂದು ಒಳ್ಳೆಯ ನಿರ್ಧಾರ ಎಂದು ಬಡಿಗೇರ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
