ತುಳುನಾಡಿನ ದೈವಾರಾಧಾನೆ ಹಿಂದೂ ಸಂಸ್ಕೃತಿ ಅಲ್ಲವೇ? ಸಂಶೋಧಕಿ ಡಾ. ಲಕ್ಷ್ಮೀ ಜಿ. ಪ್ರಸಾದ್ ಕೊಟ್ರು ಸ್ಪಷ್ಟನೆ

| Updated By: ರಾಜೇಶ್ ದುಗ್ಗುಮನೆ

Updated on: Oct 19, 2022 | 9:10 PM

ಜಾನಪದ ಸಂಶೋಧಕರಾದ ಡಾ. ಲಕ್ಷ್ಮೀ ಪ್ರಸಾದ್ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ‘ತುಳುನಾಡಿನ ದೈವಾರಾಧಾನೆ ಹಿಂದೂ ಸಂಸ್ಕೃತಿ ಅಲ್ಲವೇ?’ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ (Kantara Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ರಿಷಬ್​ಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಈ ಸಿನಿಮಾದಲ್ಲಿ ತುಳುನಾಡಿನ ದೈವಾರಾಧನೆ ಬಗ್ಗೆಯೂ ಹೇಳಲಾಗಿದೆ. ಈ ವಿಚಾರದ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ‘ದೈವಾರಾಧಾನೆ ಹಿಂದೂ ಸಂಸ್ಕೃತಿ ಅಲ್ಲ’ ಎಂಬ ಮಾತನ್ನು ನಟ ‘ಆ ದಿನಗಳು’ ಚೇತನ್ ಅವರು ಹೇಳಿದ್ದರು. ಈಗ ಇದೇ ವಿಚಾರದ ಬಗ್ಗೆ ಜಾನಪದ ಸಂಶೋಧಕರಾದ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ‘ತುಳುನಾಡಿನ ದೈವಾರಾಧಾನೆ ಹಿಂದೂ ಸಂಸ್ಕೃತಿ ಅಲ್ಲವೇ?’ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

Published on: Oct 19, 2022 09:02 PM