ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್

Edited By:

Updated on: Jan 29, 2026 | 4:40 PM

‘ಲ್ಯಾಂಡ್​ಲಾರ್ಡ್’ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ರಚಿತಾ ರಾಮ್ ಅವರು ಇದ್ದಾರೆ. ಈ ಚಿತ್ರದಲ್ಲಿ ವಿಜಯ್ ಕುಮಾರ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಈ ಸಿನಿಮಾಗೆ ಪ್ರೇಕ್ಷಕರಿಂದ ಪ್ರಶಂಸೆ ಸಿಕ್ಕಿದೆ. ಅದೇ ಖುಷಿಯಲ್ಲಿ ರಚಿತಾ ರಾಮ್ ಮದುವೆ ಬಗ್ಗೆ ಮಾತನಾಡಿದ್ದಾರೆ.

ಖ್ಯಾತ ನಟಿ ರಚಿತಾ ರಾಮ್ ಅವರು ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಅದೇ ಖುಷಿಯಲ್ಲಿ ಅವರು ಮದುವೆ (Marriage) ಬಗ್ಗೆ ಮಾತನಾಡಿದ್ದಾರೆ. ‘ಲ್ಯಾಂಡ್​ಲಾರ್ಡ್’ ಸಿನಿಮಾದಲ್ಲಿ ರಚಿತಾ ರಾಮ್ ಅವರಿಗೆ ನಿಂಗವ್ವ ಎಂಬ ಪಾತ್ರ ಇದೆ. ಆ ಪಾತ್ರವನ್ನು ನೋಡಿದ ಮೇಲೆ ನಿಮಗೆ ಮದುವೆ, ಮಕ್ಕಳು ಮಾಡಿಕೊಳ್ಳಬೇಕು ಎನಿಸಿದೆಯಾ ಎಂಬ ಪ್ರಶ್ನೆಗೆ ರಚಿತಾ ಉತ್ತರಿಸಿದ್ದಾರೆ. ‘ಮದುವೆಗೆ ಈ ವರ್ಷ ಪ್ಲ್ಯಾನ್ ಮಾಡುತ್ತಿದ್ದೇನೆ. ಯಾವಾಗ ಆಗಬೇಕೋ ಆವಾಗಲೇ ಅದು ಆಗೋದು. ಯಾರು ನಮ್ಮ ಜೀವನದಲ್ಲಿ ಬರಬೇಕು ಅಂತ ಇರುತ್ತದೋ ಅವರೇ ಬರೋದು. ನಿಂಗವ್ವ ಪಾತ್ರ ತನ್ನ ಕುಟುಂಬವನ್ನು ನೋಡಿಕೊಳ್ಳುವ ಗುಣವನ್ನು ಎಲ್ಲ ಹೆಣ್ಮಕ್ಕಳು ಅಳವಡಿಸಿಕೊಳ್ಳಬೇಕು’ ಎಂದು ರಚಿತಾ ರಾಮ್ (Rachita Ram) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.