Mandya Rain: ರಾತ್ರಿ ಸುರಿದ ಮಳೆಗೆ ಮಂಡ್ಯದಲ್ಲಿ ಭೂ ಕುಸಿತ
ನಿನ್ನೆ ರಾತ್ರಿ ರಾಜ್ಯದ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಅವಘಡಗಳು ಕೂಡ ಸಂಭವಿಸಿವೆ. ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದ ವಿಸಿ ನಾಲಾ ಸುರಂಗ ಮಾರ್ಗದಲ್ಲಿ ಏಕಾಏಕಿ ಭೂ ಕುಸಿತವಾಗಿದೆ. ಭೂಕುಸಿತದಿಂದಾಗಿ ರಾಜಣ್ಣ ಎಂಬುವರ ಮನೆ ಗೋಡೆಯೂ ಕುಸಿದಿದೆ. ಏಕಾಏಕಿ ಸುರಂಗ ಕುಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.
ಮಂಡ್ಯ, ನ.07: ಮಂಡ್ಯ ತಾಲೂಕಿನಲ್ಲಿ ರಾತ್ರಿ ಸುರಿದ ಮಳೆಯಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ (Mandya Rain). ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದ ವಿಸಿ ನಾಲಾ ಸುರಂಗ ಮಾರ್ಗದಲ್ಲಿ ಏಕಾಏಕಿ ಭೂ ಕುಸಿತವಾಗಿದೆ (Landslide). ಭೂಕುಸಿತದಿಂದಾಗಿ ರಾಜಣ್ಣ ಎಂಬುವರ ಮನೆ ಗೋಡೆಯೂ ಕುಸಿದಿದೆ. ಏಕಾಏಕಿ ಸುರಂಗ ಕುಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಹುಲಿಕೆರೆ ಗ್ರಾಮದ ಮಧ್ಯ ಭಾಗದಲ್ಲಿ ಈ ಸುರಂಗ ಹಾದುಹೋಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದಲ್ಲಿ ಸಿಡಿಲಿಗೆ 30ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ. ಮರದ ಕೆಳಗೆ ನಿಂತಿದ್ದ ಕುರಿ ಹಿಂಡಿಗೆ ಸಿಡಿಲು ಬಡಿದಿದೆ. ಕಂದಾಯ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿಗಳು ಆಗ್ರಹಿಸಿದ್ದಾರೆ. ನಾಲ್ವರು ಕುರಿಗಾಹಿಗಳಿಗೆ ಈ 30 ಕುರಿಗಳು ಸೇರಿದ್ದವು ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ