ನಿರ್ಮಾಣ ಹಂತದಲ್ಲಿರುವ ಮಂಡಿ-ಪಠಾಣ್‌ಕೋಟ್ ಹೆದ್ದಾರಿಯ ಸುರಂಗದ ಮೇಲೆ ಭೂಕುಸಿತ
"ಬಿಜ್ನಿ ಚತುಷ್ಪತ" ಯೋಜನೆಯು ಬಿಜ್ನಿ ಮತ್ತು ಮಂಡಿ ನಡುವೆ ಸಂಚಾರವನ್ನು ಸುಗಮಗೊಳಿಸುತ್ತದೆ. ಈ ಯೋಜನೆಯು ವಿಶಾಲವಾದ ಪಠಾಣ್‌ಕೋಟ್-ಮಂಡಿ ಚತುಷ್ಪಥ ಉಪಕ್ರಮದ ಭಾಗವಾಗಿದೆ. ಇದೀಗ ಭಾರೀ ಮಳೆಯಿಂದ ಭೂಕುಸಿತದಿಂದಾಗಿ ಬಿಜ್ನಿ ಚತುಷ್ಪಥ ಯೋಜನಾ ಸ್ಥಳದಲ್ಲಿ ಸುರಂಗ ಕುಸಿತ ಸಂಭವಿಸಿದೆ. ಇದು ಪರ್ವತ ಪ್ರದೇಶದ ರಸ್ತೆ ನಿರ್ಮಾಣದಲ್ಲಿನ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಿಜ್ನಿ ಚತುಷ್ಪಥ ಸುರಂಗದಲ್ಲಿ ಕುಸಿತ ಸಂಭವಿಸಿದ್ದು, ಸುರಂಗ ಪ್ರವೇಶದ್ವಾರ ಬಂದ್ ಆಗಿದೆ. ಸುರಂಗ ನಿರ್ಮಾಣ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದ್ದರಿಂದ ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.
ಮಂಡಿ: ನಿರ್ಮಾಣ ಹಂತದಲ್ಲಿರುವ ಮಂಡಿ (Mandi) -ಪಠಾಣ್‌ಕೋಟ್ ಚತುಷ್ಪಥ ಹೆದ್ದಾರಿಯಲ್ಲಿ ಬಿಜ್ನಿ ಸುರಂಗದ ಮೇಲೆ ಭೂಕುಸಿತ ಸಂಭವಿಸಿದ್ದು, ಆ ಪ್ರದೇಶದಲ್ಲಿ ಭೀತಿ ಉಂಟಾಗಿದೆ. “ಬಿಜ್ನಿ ಚತುಷ್ಪತ” ಯೋಜನೆಯು ಬಿಜ್ನಿ ಮತ್ತು ಮಂಡಿ ನಡುವೆ ಸಂಚಾರವನ್ನು ಸುಗಮಗೊಳಿಸುತ್ತದೆ. ಈ ಯೋಜನೆಯು ವಿಶಾಲವಾದ ಪಠಾಣ್‌ಕೋಟ್-ಮಂಡಿ ಚತುಷ್ಪಥ ಉಪಕ್ರಮದ ಭಾಗವಾಗಿದೆ. ಇದೀಗ ಭಾರೀ ಮಳೆಯಿಂದ ಭೂಕುಸಿತದಿಂದಾಗಿ ಬಿಜ್ನಿ ಚತುಷ್ಪಥ ಯೋಜನಾ ಸ್ಥಳದಲ್ಲಿ ಸುರಂಗ ಕುಸಿತ ಸಂಭವಿಸಿದೆ. ಇದು ಪರ್ವತ ಪ್ರದೇಶದ ರಸ್ತೆ ನಿರ್ಮಾಣದಲ್ಲಿನ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಿಜ್ನಿ ಚತುಷ್ಪಥ ಸುರಂಗದಲ್ಲಿ ಕುಸಿತ ಸಂಭವಿಸಿದ್ದು, ಸುರಂಗ ಪ್ರವೇಶದ್ವಾರ ಬಂದ್ ಆಗಿದೆ. ಸುರಂಗ ನಿರ್ಮಾಣ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದ್ದರಿಂದ ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ