ಶ್ರಾವಣ ಮಾಸದ ಕೊನೆಯ ಶನಿವಾರ: ಚಿಕ್ಕ ಮಧುರೆ ಶನಿಮಹಾತ್ಮ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 31, 2024 | 3:39 PM

ಕೊನೆಯ ಶ್ರಾವಣ ಶನಿವಾರ ಹಿನ್ನಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮಧುರೆ ಗ್ರಾಮದ ಶನಿಮಹಾತ್ಮ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬಂದಿದೆ. ಕೊನೆಯ ಶ್ರಾವಣವಿರುವುದರಿಂದ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೂ ಶನಿಮಹಾತ್ಮ ಸ್ವಾಮಿಗೆ ತೈಲಾಭಿಷೇಕ ಪಂಚಾಮೃತ ಅಭಿಷೇಕ ನಡೆಸಿ ವಿಶೇಷ ಪೂಜೆ ಮಾಡಲಾಗಿದೆ.

ದೇವನಹಳ್ಳಿ, ಆಗಸ್ಟ್​ 31: ಶ್ರಾವಣ (Shraavana) ಮಾಸದ ಕೊನೆಯ ಶನಿವಾರ ಹಿನ್ನೆಲೆ ದೇವಾಲಯಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿಯ ಚಿಕ್ಕ ಮಧುರೆ ಕ್ಷೇತ್ರದ ಶನಿಮಹಾತ್ಮ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬಂದಿದೆ. ಇನ್ನು ಕೊನೆಯ ಶ್ರಾವಣ ಶನಿವಾರ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗಿನಿಂದಲೂ ಶನಿಮಹಾತ್ಮ ಸ್ವಾಮಿಗೆ ತೈಲಾಭಿಷೇಕ ಪಂಚಾಮೃತ ಅಭಿಷೇಕ ನಡೆಸಿ ವಿಶೇಷ ಪೂಜೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on