Video: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್

Updated on: Jan 08, 2026 | 8:38 AM

ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ಬ್ಲಿಂಕಿಟ್ ಡೆಲಿವರಿ ಏಜೆಂಟ್ ರಕ್ಷಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬ್ಲಿಂಕ್ ಇಟ್​ಗೆ ಆರ್ಡರ್ ನೋಟಿಫಿಕೇಷನ್ ಬಂದಿತ್ತು, ಡೆಲಿವರಿ ಏಜೆಂಟ್ ಒಬ್ಬರು ಅದನ್ನು ಡೆಲಿವರಿ ಮಾಡಬೇಕೆಂದು ಬಂದಾಗ ಅಚ್ಚರಿಯೊಂದು ಕಾದಿತ್ತು. ಇಬ್ಬರು ಸ್ನೇಹಿತರು ಬಾಲ್ಕನಿಯಲ್ಲಿ ಲಾಕ್ ಆಗಿದ್ದರು, ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಅವರು ಗಾಬರಿಗೊಳ್ಳಲಿಲ್ಲ ಬದಲಾಗಿ, ಬ್ಲಿಂಕ್ ಇಟ್​ನಲ್ಲಿ ಏನಾದರೂ ಆರ್ಡರ್ ಮಾಡುವ ನಿರ್ಧಾರ ಮಾಡಿದರು.

ಪುಣೆ, ಜನವರಿ 08: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ಬ್ಲಿಂಕಿಟ್ ಡೆಲಿವರಿ ಏಜೆಂಟ್ ರಕ್ಷಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬ್ಲಿಂಕ್ ಇಟ್​ಗೆ ಆರ್ಡರ್ ನೋಟಿಫಿಕೇಷನ್ ಬಂದಿತ್ತು, ಡೆಲಿವರಿ ಏಜೆಂಟ್ ಒಬ್ಬರು ಅದನ್ನು ಡೆಲಿವರಿ ಮಾಡಬೇಕೆಂದು ಬಂದಾಗ ಅಚ್ಚರಿಯೊಂದು ಕಾದಿತ್ತು. ಇಬ್ಬರು ಸ್ನೇಹಿತರು ಬಾಲ್ಕನಿಯಲ್ಲಿ ಲಾಕ್ ಆಗಿದ್ದರು, ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಅವರು ಗಾಬರಿಗೊಳ್ಳಲಿಲ್ಲ ಬದಲಾಗಿ, ಬ್ಲಿಂಕ್ ಇಟ್​ನಲ್ಲಿ ಏನಾದರೂ ಆರ್ಡರ್ ಮಾಡುವ ನಿರ್ಧಾರ ಮಾಡಿದರು. ಡೆಲಿವರಿ ಮಾಡಲು ಬಂದವರ ಬಳಿ ಸಹಾಯ ಕೇಳುವುದು ಅವರ ಪ್ಲ್ಯಾನ್ ಆಗಿತ್ತು. ಮಲಗಿದ್ದ ಪೋಷಕರಿಗೆ ಡಿಸ್ಟರ್ಬ್ ಆಗದಂತೆ ಮುಖ್ಯ ಬಾಗಿಲನ್ನು ತೆರೆಯುವುದು ಹೇಗೆ ಎಂಬುದನ್ನು ಸೂಚಿಸಿದರು. ಈ ಘಟನೆಯನ್ನು ಪುಣೆ ನಿವಾಸಿ ಮಿಹಿರ್ ಗಹುಕರ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More