ದರ್ಶನ್ ಅನ್ನು ಭೇಟಿ ಮಾಡಿ ಬಂದ ವಕೀಲರು ಹೇಳಿದ್ದು ಹೀಗೆ

|

Updated on: Jun 16, 2024 | 10:27 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಅವರನ್ನು ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇಂದು (ಜೂನ್ 16) ದರ್ಶನ್ ಅನ್ನು ಭೇಟಿಯಾದ ವಕೀಲರು ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದರು.

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan Thoogudeepa) ಹಾಗೂ ಇತರೆ ಕೆಲವು ಆರೋಪಿಗಳನ್ನು ಮತ್ತೆ ಐದು ದಿನಗಳ ಕಾಲ ಪೊಲೀಸರು ವಶಕ್ಕೆ ನೀಡಿ ನಿನ್ನೆಯಷ್ಟೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿದೆ. ಇದರ ಜೊತೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ 8:30 ವರೆಗೆ ದರ್ಶನ್ ಅವರನ್ನು ಅವರ ಪರ ವಕೀಲರು ಭೇಟಿ ಆಗಬಹುದೆಂದು ಸಹ ನ್ಯಾಯಾಲವು ಅನುಮತಿ ನೀಡಿದೆ. ಅದರಂತೆ ಇಂದು (ಜೂನ್ 16) ದರ್ಶನ್ ಪರ ವಕೀಲರಾದ ರಂಗನಾಥ ರೆಡ್ಡಿ ಮತ್ತು ಅನಿಲ್ ಬಾಬು ಭೇಟಿ ಮಾಡಿ ಗೌಪ್ಯವಾಗಿ ಮಾತನಾಡಿದರು. ದರ್ಶನ್ ಅವರ ಭೇಟಿಯ ಬಳಿಕ ವಕೀಲ ರಂಗನಾಥ ರೆಡ್ಡಿ ಮಾಧ್ಯಮಗಳ ಮುಂದೆ ಘಟನೆ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on