ರೇಣುಕಾ ಸ್ವಾಮಿಯ ಕೊಲ್ಲುವ ಮುಂಚೆ ಕೊಟ್ಟಿದ್ದರು ಎಲೆಕ್ಟ್ರಿಕ್ ಶಾಕ್

ನಟ ದರ್ಶನ್ ತೂಗುದೀಪ ಮತ್ತು ಗ್ಯಾಂಗ್​ ನವರು ರೇಣುಕಾ ಸ್ವಾಮಿಯ ಕೊಲ್ಲುವ ಮುಂಚೆ ರಾಕ್ಷಸರ ರೀತಿ ಚಿತ್ರಹಿಂಸೆ ಕೊಟ್ಟಿದ್ದರು ಎನ್ನಲಾಗುತ್ತಿದೆ. ನಿನ್ನೆ ನ್ಯಾಯಾಲಯದಲ್ಲಿ ವಾದಿಸಿರುವ ವಕೀಲರು, ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿತ್ತು ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ರೇಣುಕಾ ಸ್ವಾಮಿಯ ಕೊಲ್ಲುವ ಮುಂಚೆ ಕೊಟ್ಟಿದ್ದರು ಎಲೆಕ್ಟ್ರಿಕ್ ಶಾಕ್
ರೇಣುಕಾ ಸ್ವಾಮಿ
Follow us
ಮಂಜುನಾಥ ಸಿ.
|

Updated on: Jun 16, 2024 | 10:01 AM

ದಿನಗಳದಂತೆ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಭೀಕರ ಅಂಶಗಳು ಹೊರಬೀಳುತ್ತಿವೆ. ಆರಂಭದಲ್ಲಿ, ಭಯಪಡಿಸಲು ಹೋಗಿ ಮಾಡಲಾಗಿರುವ ಹತ್ಯೆ ಎನ್ನಲಾಗಿತ್ತು, ಆದರೆ ಪ್ರಕರಣ ಮುಂದುವರೆದಂತೆ ರೇಣುಕಾ ಸ್ವಾಮಿಯನ್ನು ದರ್ಶನ್ ಹಾಗೂ ಗ್ಯಾಂಗ್ ಹೇಗೆಲ್ಲ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬ ಅಂಶಗಳು ಬಹಿರಂಗವಾಗುತ್ತಿವೆ. ನಿನ್ನೆ (ಜೂನ್ 15) ದರ್ಶನ್ ಮತ್ತು ಗ್ಯಾಂಗ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ನಡೆದ ವಾದ ವಿವಾದದಲ್ಲಿ ದರ್ಶನ್ ಮತ್ತು ಗ್ಯಾಂಗ್​ ರೇಣುಕಾ ಸ್ವಾಮಿಗೆ ನೀಡಿದ್ದ ರಾಕ್ಷಸ ರೀತಿಯ ಚಿತ್ರಹಿಂಸೆಯ ವಿವರ ಹೊರಬಿದ್ದಿದೆ.

ದರ್ಶನ್ ಮತ್ತು ಗ್ಯಾಂಗ್ ಅನ್ನು ಮತ್ತೆ ಒಂಬತ್ತು ದಿನಗಳ ಕಾಲ ವಶಕ್ಕೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು, ಈ ಹಂತದಲ್ಲಿ ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರಾಗಿ ನೇಮಕವಾಗಿರುವ ಪ್ರಸನ್ನ ಕುಮಾರ್ ಅವರು ಪೊಲೀಸರ ಪರ ವಾದ ಮಂಡಿಸಿ, ನ್ಯಾಯಾಲಯದ ಗಮನಕ್ಕೆ ತಂದ ಅಂಶವೆಂದರೆ ರೇಣುಕಾ ಸ್ವಾಮಿಯನ್ನು ಕೊಲ್ಲುವ ಮುಂಚೆ ಆತನಿಗೆ ಕರೆಂಟ್ ಶಾಕ್ ನೀಡಲಾಗಿತ್ತು ಎಂಬುದು.

ನ್ಯಾಯಾಲಯದಲ್ಲಿ ದರ್ಶನ್ ಹಾಗೂ ಗ್ಯಾಂಗ್​ನ ಕ್ರೂರತೆಯ ಬಗ್ಗೆ ಸಣ್ಣ ಸುಳಿವೊಂದನ್ನು ನೀಡಿದ ಹಿರಿಯ ವಕೀಲ ಪ್ರಸನ್ನ ಕುಮಾರ್ ಅವರು ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದ್ದು, ಆ ಕರೆಂಟ್ ಶಾಕ್ ನೀಡಲು ಬಯಸಿದ್ದ ಮೆಗ್ಗರ್ ಯಂತ್ರವನ್ನು ಸಹ ವಶಪಡಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ, ಮೈಸೂರಿನಲ್ಲಿ ಕೆಲವು ಕಡೆ ಆರೋಪಿಯೊಟ್ಟಿಗೆ ಮಹಜರು ಮಾಡಬೇಕಿದೆ. ಆರೋಪಿಯ ಬಟ್ಟೆ ಹಾಗೂ ಚಪ್ಪಲಿಗಳನ್ನು ಸಹ ವಶಪಡಿಸಿಕೊಳ್ಳಬೇಕಿದೆ’ ಎಂದು ಸಹ ವಾದಿಸಿದ್ದಾರೆ.

ಇದನ್ನೂ ಓದಿ:ಕೊಲೆಗಡುಕರಿಗೆ ಶಿಕ್ಷೆ ಆಗಲಿ; ಎಂಎಲ್​ಎ ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ

ಕೆಲವು ಆರೋಪಿಗಳು ರೇಣುಕಾ ಸ್ವಾಮಿ ಕೊಲೆಯಾದ ದಿನ ನಡೆದ ಘಟನೆಗಳನ್ನು ಈಗಾಗಲೇ ವಿವರಿಸಿದ್ದು, ಕೆಲವರು ಅಪ್ರೂವರ್ ಆಗಿ ಸಹ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಹಲ್ಲೆ ಮಾಡಲಾಗಿದೆ, ಕೃಷ ದೇಹಿಯಾಗಿದ್ದ ರೇಣುಕಾ ಸ್ವಾಮಿಯನ್ನು ಎತ್ತಿ ಗೋಡೆಗೆ ಹೊಡೆಯಲಾಗಿದೆ, ಸಿಗರೇಟಿನಿಂದ ದೇಹದ ಮೇಲೆ ಸುಡಲಾಗಿದೆ. ತಲೆಯನ್ನು ಬಲವಾಗಿ ಟ್ಯಾಂಕರ್ ವಾಹನಕ್ಕೆ ಹೊಡೆಯಲಾಗಿದೆ. ಇದೆಲ್ಲದರ ಬಳಿಕ ಶೆಡ್​ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಅಮಾಯಕ ಕೂಲಿ ಕೆಲಸದವರನ್ನು ಪುಸಲಾಯಿಸಿ ಹತ್ಯೆ ಆರೋಪವನ್ನು ಒಪ್ಪಿಕೊಳ್ಳಲಂತೆ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ