ಬಿಜೆಪಿ ನಾಯಕರ ‘ಕುದುರೆ ವ್ಯಾಪಾರ’ ಆರೋಪಕ್ಕೆ ಕಾಂಗ್ರೆಸ್​ ಶಾಸಕ ಲಕ್ಷ್ಮಣ ಸವದಿ ಟಕ್ಕರ್​

Updated on: Nov 25, 2025 | 1:43 PM

ಸಿಎಂ ಪಟ್ಟಕ್ಕಾಗಿ ಸ್ವಪಕ್ಷದ ಶಾಸಕರಿಗೇ ಕಾಂಗ್ರೆಸ್​​ ನಾಯಕರು 50-100 ಕೋಟಿ ರೂ. ಆಫರ್​ ಮಾಡುತ್ತಿದ್ದಾರೆ ಎಂಬ ಬಿಜೆಪಿಗರ ಹೇಳಿಕೆಗೆ ಶಾಸಕ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ಜೊತೆಗೆ ಪಕ್ಷದಲ್ಲಿ ನಡೆಯುತ್ತಿರುವ ಪ್ರಸಕ್ತ ಬೆಳವಣಿಗೆಗಳನ್ನು ರಾಷ್ಟ್ರೀಯ ನಾಯಕರು ಶೀಘ್ರ ಇತ್ಯರ್ಥಪಡಿಸಬೇಕು. ಇಲ್ಲವಾದರೆ ಇದು ಪಕ್ಷಕ್ಕೆ ಮುಜುಗರ ಮತ್ತು ಹಾನಿ ಉಂಟುಮಾಡುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿ, ನವೆಂಬರ್​ 25: ರಾಜ್ಯ ಕಾಂಗ್ರೆಸ್​​ನಲ್ಲಿ ಪಟ್ಟಕ್ಕಾಗಿ ಫೈಟ್​ ಬಗ್ಗೆ ಪ್ರತಿಕ್ರಿಸಿದ್ದ ಬಿಜೆಪಿ ನಾಯಕರು ಶಾಸಕರಿಗೆ 50ರಿಂದ 100 ಕೋಟಿ ರೂ. ಆಫರ್​ ಮಾಡ್ತಿರುವ ಬಗ್ಗೆ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಸಿರೋ ಕಾಂಗ್ರೆಸ್​​ ಶಾಸಕ ಲಕ್ಷ್ಮಣ ಸವದಿ ಕಮಲ ಪಡೆಗೆ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಹಳೆಯ ದಿನಗಳನ್ನು, ಅಂದರೆ 2019ರ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಸವದಿ ವ್ಯಂಗ್ಯವಾಡಿದ್ದಾರೆ. ಜೊತೆಗೆ ಪಕ್ಷದಲ್ಲಿ ನಡೆಯುತ್ತಿರುವ ಪ್ರಸಕ್ತ ಬೆಳವಣಿಗೆಗಳನ್ನು ರಾಷ್ಟ್ರೀಯ ನಾಯಕರು ಶೀಘ್ರ ಇತ್ಯರ್ಥಪಡಿಸಬೇಕು. ಇಲ್ಲವಾದರೆ ಇದು ಪಕ್ಷಕ್ಕೆ ಮುಜುಗರ ಮತ್ತು ಹಾನಿ ಉಂಟುಮಾಡುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 25, 2025 01:41 PM