ಮುಡಾ ಪ್ರಕರಣದಲ್ಲಿ ಎಲ್ಲ ಪಕ್ಷ ಮತ್ತು ಜಾತಿ-ಧರ್ಮಗಳ ಜನ ಶಾಮೀಲಾಗಿದ್ದಾರೆ: ಸ್ನೇಹಮಯಿ ಕೃಷ್ಣ
ಯಾರೇ ಅಡ್ಡಬಂದರೂ ತನ್ನ ಹೋರಾಟ ಮಾತ್ರ ನಿಲ್ಲದು, ಜೀವ ಇರೋವರೆಗೆ ಹೋರಾಡುತ್ತೇನೆ ಮತ್ತು ಜೀವ ಹೋದರೂ ಹೋರಾಟ ಮುಂದುವರಿಯುವ ವ್ಯವಸ್ಥೆಯನ್ನು ತಾನು ಮಾಡಿರುವುದಾಗಿ ಸ್ನೇಹಮಯಿ ಕೃಷ್ಣ ಹೇಳುತ್ತಾರೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಬೆಳವಣಿಗೆಗಳು ಜರುಗುತ್ತಿವೆ, ಅದರೆ ಪ್ರಕರಣವನ್ನು ತಾರ್ಕಿಕ ಅಂತ್ಯ ಮುಟ್ಟಿಸುವವರೆಗೆ ವಿಶ್ರಮಿಸುವುದಿಲ್ಲ ಎಂದು ಕೃಷ್ಣ ಹೇಳುತ್ತಾರೆ.
ಮೈಸೂರು: ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಟೆದೆಯ ವ್ಯಕ್ತಿ ಅನ್ನೋದ್ರಲ್ಲಿ ಅನುಮಾನ ಬೇಡ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರೊಬ್ಬರು ತನಗೆ ಅಮಿಶವೊಡ್ಡಿರುವ ಬಗ್ಗೆ ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು, ಭಷ್ಟಾಚಾರದ ಮಹಾಕೂಪದಲ್ಲಿ ಎಲ್ಲ ಪಕ್ಷಗಳ, ಜಾತಿ-ಧರ್ಮಗಳ ಜನ ಶಾಮೀಲಾಗಿದ್ದಾರೆ, ಈ ಪ್ರಕರಣ ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮತ್ತು ಕುಟುಂಬಕ್ಕೆ ಸೀಮಿತವಾಗಿಲ್ಲ, ಎಲ್ಲರ ಉದ್ದೇಶ ಒಂದೇ-ತಾನು ಪ್ರಕರಣವನ್ನು ಹಿಂಪಡೆಯಬೇಕು ಮತ್ತು ಪ್ರಕರಣ ತನಿಖೆ ಸಿಬಿಐ ವಹಿಸಿಕೊಳ್ಳಬಾರದು ಅನ್ನೋದಾಗಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ!