ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಜನರನ್ನು ಗೊಂದಲಕ್ಕೆ ದೂಡುತ್ತಿದ್ದಾರೆ: ಬಿವೈ ವಿಜಯೇಂದ್ರ
ನಮ್ಮ ನಾಡಿನ ಪ್ರಜ್ಞಾವಂತ ಮತದಾರರು ಯಾವುದು ಸರಿ ಯಾವುದು ತಪ್ಪು ಆಂತ ವಿವೇಚಿಸಬಲ್ಲವರಾಗಿದ್ದಾರೆ, ಇವರ ಮರಳು ಮಾಡುವ ಮಾತುಗಳಿಗೆ ಬೇಸ್ತು ಬೀಳುವುದಿಲ್ಲ ಅಂತ ವಿಜಯೇಂದ್ರ ಹೇಳಿದರು.
ಬೆಂಗಳೂರು: ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರು ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಬಿಎಸ್ ಯಡಿಯೂರಪ್ಪನವರ (BS Yediyurappa) ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ ಮತ್ತು ಜನರನ್ನು ಗೊಂದಲಕ್ಕೆ ದೂಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ನಿರ್ದಿಷ್ಟವಾಗಿ ಅವರು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಕುರಿತು ಈ ಮಾತನ್ನು ಹೇಳಿದರು. ಮುಂದುವರಿದು ಮಾತಾಡಿದ ವಿಜಯೇಂದ್ರ, ನಮ್ಮ ನಾಡಿನ ಪ್ರಜ್ಞಾವಂತ ಮತದಾರರು ಯಾವುದು ಸರಿ ಯಾವುದು ತಪ್ಪು ಆಂತ ವಿವೇಚಿಸಬಲ್ಲವರಾಗಿದ್ದಾರೆ, ಇವರ ಮರಳು ಮಾಡುವ ಮಾತುಗಳಿಗೆ ಬೇಸ್ತು ಬೀಳುವುದಿಲ್ಲ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 08, 2023 05:00 PM
Latest Videos