ಶಿವಮೊಗ್ಗ: ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಪ್ರಜಾಧ್ವನಿ ಯಾತ್ರೆ ಶಿವಮೊಗ್ಗದ ಪೇಪರ್ ಟೌನ್ ಭದ್ರಾವತಿ (Bhadravati) ತಲುಪಿದೆ. ಆದರೆ ಭದ್ರಾವತಿ ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದಾಲೇ ವೇದಿಕೆ ಮೇಲಿದ್ದ ಕಾರ್ಯಕರ್ತರ (party workers) ನಡುವೆ ಅದ್ಯಾವುದೋ ಕಾರಣಕ್ಕೆ ಗಲಾಟೆ ಶುರುವಾಯಿತು. ಗಲಾಟೆಗೆ ಕಾರಣವೇನು ಅನ್ನೋದು ಗೊತ್ತಾಗಿಲ್ಲ ಮಾರಾಯ್ರೇ. ಆದರೆ ಶಿವಕುಮಾರ್ ಸೇರಿದಂತೆ ವೇದಿಕೆ ಮೇಲಿದ್ದ ನಾಯಕರೆಲ್ಲ ಗಲಾಟೆ ಮಾಡುತ್ತಿದ್ದ ಕಾರ್ಯಕರ್ತರನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ. ಪೋಡಿಯಂ ಬಳಿ ಮೈಕ್ ಹಿಡಿದು ನಿಂತಿದ್ದ ಕಾರ್ಯಕರ್ತರಿಬ್ಬರು ಎಲ್ಲರೂ ನಮ್ಮ ಕಾರ್ಯಕರ್ತರೇ ಅಂತ ಅರಚುತ್ತಾ ಹೇಳಿದರೂ ತಲೆಮೇಲೆ ಗಾಂಧಿಟೋಪಿ ಧರಿಸಿದ್ದ ಕಾರ್ಯಕರ್ತರು ಸಮಾಧಾನಗೊಳ್ಳಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ