Assembly Polls: ಶಿವಲಿಂಗೇಗೌಡರು ಯಾವಾಗ ಕಾಂಗ್ರೆಸ್ ಸೇರುತ್ತಾರೆ ಅನ್ನೋದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ: ಡಿಕೆ ಸುರೇಶ್

Assembly Polls: ಶಿವಲಿಂಗೇಗೌಡರು ಯಾವಾಗ ಕಾಂಗ್ರೆಸ್ ಸೇರುತ್ತಾರೆ ಅನ್ನೋದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 08, 2023 | 3:47 PM

ಶಿವಲಿಂಗೇಗೌಡರು ಮಾತ್ರ ಅಲ್ಲ, ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಬಯಸುವವರಿಗೆಲ್ಲ ತಾನು ಮುಕ್ತ ಆಹ್ವಾನ ನೀಡುತ್ತಿರುವುದಾಗಿ ಸುರೇಶ್ ಹೇಳಿದರು.

ಹಾಸನ: ಜೆಡಿಎಸ್ ಶಾಸಕ ಕೆಎಮ್ ಶಿವಲಿಂಗೇಗೌಡರು (KM Shivalingegowda) ಪಕ್ಷವನ್ನು ತೊರೆದು ಕಾಂಗ್ರೆಸ್ (Congress) ಸೇರಲಿದ್ದಾರೆ ಅನ್ನೋದು ಬಹಳ ದಿನಗಳಿಂದ ಚರ್ಚೆಯಾಗುತ್ತಿರುವ ವಿಷಯ. ಆದರೆ ಆ ದಿನ ಇನ್ನೂ ಕೂಡಿ ಬಂದಿಲ್ಲ ಅನಿಸುತ್ತಿದೆ. ಹಾಸನದಲ್ಲಿಂದು ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಅವರು ಶಿವಲಿಂಗೇಗೌಡರು ಯಾವಾಗ ಪಕ್ಷಕ್ಕೆ ಸೇರಲಿದ್ದಾರೆ ಅಂತ ಗೊತ್ತಿಲ್ಲ, ಆ ಬಗ್ಗೆ ಪಕ್ಷದ ವರಿಷ್ಟರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಶಿವಲಿಂಗೇಗೌಡರು ಮಾತ್ರ ಅಲ್ಲ, ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಬಯಸುವವರಿಗೆಲ್ಲ ತಾನು ಮುಕ್ತ ಆಹ್ವಾನ ನೀಡುತ್ತಿರುವುದಾಗಿ ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 08, 2023 03:43 PM