ಆಪ್ತ ಜಮೀರ್ ಅಹ್ಮದ್ ರೊಂದಿಗೆ ಕಲಬುರಗಿಯ ಶೇಖ್ ರೋಜಾದಲ್ಲಿರುವ ದರ್ಗಾಗೆ ಭೇಟಿ ನೀಡಿದ ಸಿದ್ದರಾಮಯ್ಯ!
ವಿರೋಧ ಪಕ್ಷದ ನಾಯಕರೊಂದಿಗೆ ಅವರ ಆಪ್ತ ಶಿಷ್ಯ ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ ಮತ್ತು ಇತರ ನಾಯಕರಿದ್ದರು.
ಕಲಬುರಗಿ: ಕೊಪ್ಪಳ ಬಳ್ಳಾರಿ ಮತ್ತು ರಾಯಚೂರು ಮೊದಲಾದ ಕಡೆ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಮತ್ತು ಅವರ ಪತ್ನಿ ಅರುಣ ಲಕ್ಷ್ಮಿ ದರ್ಗಾಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಮುಸ್ಲಿಂ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅತ್ತ ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಹ ನಗರದ ಶೇಖ್ ರೋಜಾದಲ್ಲಿರುವ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ವಿರೋಧ ಪಕ್ಷದ ನಾಯಕರೊಂದಿಗೆ ಅವರ ಆಪ್ತ ಶಿಷ್ಯ ಜಮೀರ್ ಅಹ್ಮದ್ (Zameer Ahmed), ಪ್ರಿಯಾಂಕ್ ಖರ್ಗೆ ಮತ್ತು ಇತರ ನಾಯಕರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 08, 2023 01:58 PM
Latest Videos