Karnataka Assembly session: ರಾಜಣ್ಣರನ್ನು ಸಂಪುಟದಿಂದ ವಜಾ ಮಾಡಿರುವುದಕ್ಕೆ ವಿವರಣೆ ಕೇಳಿದ ವಿಪಕ್ಷ ನಾಯಕರು

Updated on: Aug 12, 2025 | 12:14 PM

Karnataka Assembly session:ಸಭಾಧ್ಯಕ್ಷ ಖಾದರ್ ಅವರು ರಾಜಣ್ಣ ವಿಷಯ ಪಕ್ಷದ ಆಂತರಿಕ ವಿಷಯ ಅಂತ ಹೇಳಿದಾಗ ಅಸಮಾಧಾನಗೊಳ್ಳುವ ಬಿಜೆಪಿ ಶಾಸಕ ಸುರೇಶ್ ಕುಮಾರ್ ಎದ್ದುನಿಂತು ಇದೆ ಹೇಗೆ ಆಂತರಿಕ ವಿಷಯವಾಗುತ್ತದೆ? ವಿಧಾನಸಭಾ ಅಧಿವೇಶನ ನಡೆಯುವುವಾಗ ಅವರನ್ನು ವಜಾ ಮಾಡಲಾಗಿದೆ ಅನ್ನುತ್ತಾರೆ. ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಪ್ರಶ್ನೋತ್ತರ ವೇಳೆ ಮುಗಿದ ಬಳಿಕ ಉತ್ತರ ಕೊಡೋದಾಗಿ ಹೇಳುತ್ತಾರೆ.

ಬೆಂಗಳೂರು, ಆಗಸ್ಟ್ 12: ಇಂದು ಸದನದ ಕಲಾಪ (Assembly session) ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಅರ್ ಆಶೋಕ ಮತ್ತು ಸದಸ್ಯರು ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉತ್ತರ ಬಯಸಿದರು. ಮುಖ್ಯಮಂತ್ರಿ ಬಂದ ಬಳಿಕ ಉತ್ತರ ನೀಡುತ್ತಾರೆ, ಪ್ರಶ್ನೋತ್ತರ ವೇಳೆಯನ್ನು ಅರಂಭಿಸುತ್ತಿದ್ದೇನೆ ಎಂದು ಸಭಾಧ್ಯಕ್ಷ ಯುಟಿ ಖಾದರ್ ಹೇಳಿದರೂ ಪಟ್ಟು ಬಿಡದ ಅಶೋಕ ಉತ್ತರಕ್ಕಾಗಿ ಒತ್ತಾಯಿಸಿದರು. ಅವರನ್ನು ಸಂಪುಟದಿಂದ ವಜಾ ಮಾಡಿ ಒಂದು ದಿನವಾಗಿದೆ. ಈ ಬೆಳವಣಿಗೆ ಅಧಿವೇಶನ ನಡೆಯುತ್ತಿದ್ದಾಗ ಸಂಭವಿಸಿದೆ, ಹಾಗಾಗಿ, ಸದನದಲ್ಲೇ ಇದಕ್ಕೆ ಉತ್ತರ ಬೇಕು, ರಾಜಣ್ಣ ಅವರು ಸದನದ ಹೊರಗಡೆ ತಮ್ಮ ವಿರುದ್ಧ ಪಿತೂರಿ, ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದಾರೆ, ಅವರು ಹೇಳಬೇಕಿರುವುದನ್ನು ಸದನದಲ್ಲಿ ಹೇಳಲಿ ಎಂದು ಅಶೋಕ ಹೇಳಿದರು.

ಇದನ್ನೂ ಓದಿ:    ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಸದನದಲ್ಲಿ ಅಶೋಕ್​ ಪ್ರಶ್ನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ