Karnataka Budget Session: ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯ; ಎಲ್ಲ ಸುಳ್ಳು ಅಂತ ಸಭಾತ್ಯಾಗ ಮಾಡಿದ ವಿರೋಧ ಪಕ್ಷ
ಅಶೋಕ ಮಾತಿಗೆ ಉತ್ತರಿಸಿದ ಸಿದ್ದರಾಮಯ್ಯ ಬರ ಪರಿಹಾರ ನಿಧಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ 13 ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ, 4 ತಿಂಗಳಿಂದ ದೆಹಲಿಗೆ ಹೋಗಿ ಮಂತ್ರಿಗಳನ್ನು ಭೇಟಿಯಾಗಿ ಬಂದರೂ ಹಣ ಬಿಡುಗಡೆ ಮಾಡುತ್ತಿಲ್ಲ, ಬಿಜೆಪಿ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿಲ್ಲ, ವಾಸ್ತವಾಂಶ ಎದುರಿಸಲಾಗದೆ ಸಭಾತ್ಯಾಗ ಮಡುತ್ತಿದ್ದಾರೆ, ನಾಚಿಕೆಯಾಗಬೇಕು ಇವರಿಗೆ ಎಂದು ಹೇಳಿದರು.
ಬೆಂಗಳೂರು: ಬಿಜೆಪಿ ಶಾಸಕರಿಗೆ ಸಭಾತ್ಯಾಗ ಮಾಡುವುದು ಅಭ್ಯಾಸವಾದಂತಿದೆ. ಸರ್ಕಾರವನ್ನು ಯಾವುದೇ ಪಕ್ಷ ನಡೆಸುತ್ತಿರಲಿ ಮತ್ತು ವಿರೋಧ ಪಕ್ಷ ಯಾವುದೇ ಆಗಿರಲಿ ಸಭಾತ್ಯಾಗ (walk out) ಮಾಡೋದ್ರಿಂದ ಯಾವುದಾದರೂ ಸಾಧನೆಯಾಗುತ್ತದೆಯೇ? ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ (debate on governor’s speech) ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಉತ್ತರಿಸಿದ ಬಳಿಕ ವಿಪಕ್ಷ ಬಿಜೆಪಿ ಸಭಾತ್ಯಾಗ ಮಾಡಿತು. ಅದಕ್ಕೂ ಮೊದಲು ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ, ಸರ್ಕಾರ ರಾಜ್ಯಪಾಲರ ಬಾಯಲ್ಲಿ ಕೇವಲ ಸುಳ್ಳು ಹೇಳಿಸಿದೆ, ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ಕಾಂಗ್ರೆಸ್ ಸರ್ಕಾರದಿಂದ ಒಂದೇ ಒಂದು ಅಭಿವೃದ್ಧಿ ಕೆಲಸವಾಗಿಲ್ಲ, ಬರೀ ಸುಳ್ಳು ಘೋಷಣೆ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಅಶೋಕ ಹೇಳುವಾಗಲೇ ಬಿಜೆಪಿ- ಜೆಡಿಎಸ್ ಪಕ್ಷಗಲ ಸದಸ್ಯರು ಸಭೆಯಿಂದ ಹೊರನಡೆಯಲಾರಂಭಿಸಿದರು. ಅಶೋಕ ಮಾತಿಗೆ ಉತ್ತರಿಸಿದ ಸಿದ್ದರಾಮಯ್ಯ ಬರ ಪರಿಹಾರ ನಿಧಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ 13 ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ, 4 ತಿಂಗಳಿಂದ ದೆಹಲಿಗೆ ಹೋಗಿ ಮಂತ್ರಿಗಳನ್ನು ಭೇಟಿಯಾಗಿ ಬಂದರೂ ಹಣ ಬಿಡುಗಡೆ ಮಾಡುತ್ತಿಲ್ಲ, ಬಿಜೆಪಿ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿಲ್ಲ, ವಾಸ್ತವಾಂಶ ಎದುರಿಸಲಾಗದೆ ಸಭಾತ್ಯಾಗ ಮಡುತ್ತಿದ್ದಾರೆ, ನಾಚಿಕೆಯಾಗಬೇಕು ಇವರಿಗೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ