AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Session: ಕೃಷಿಭಾಗ್ಯ ಯೋಜನೆಯನ್ನು ನಮ್ಮ ಸರ್ಕಾರ ಜಾರಿ ಮಾಡಿದ್ದ ಏಕೈಕ ಕಾರಣಕ್ಕೆ ಬಿಜೆಪಿ ಸರ್ಕಾರ ನಿಲ್ಲಿಸಿಬಿಟ್ಟಿತ್ತು: ಸಿದ್ದರಾಮಯ್ಯ

Karnataka Budget Session: ಕೃಷಿಭಾಗ್ಯ ಯೋಜನೆಯನ್ನು ನಮ್ಮ ಸರ್ಕಾರ ಜಾರಿ ಮಾಡಿದ್ದ ಏಕೈಕ ಕಾರಣಕ್ಕೆ ಬಿಜೆಪಿ ಸರ್ಕಾರ ನಿಲ್ಲಿಸಿಬಿಟ್ಟಿತ್ತು: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 20, 2024 | 3:01 PM

Share

2023-24 ಸಾಲಿನಲ್ಲಿ ಕರ್ನಾಟಕದಿಂದ ತೆರಿಗೆಗಳ ಮೂಲಕ ಕೇಂದ್ರಕ್ಕೆ 4 ಲಕ್ಷ 30 ಸಾವಿರ ಕೋಟಿ ರೂ. ಹೋಗಿದೆ, ಅದರೆ ಡಿವೋಲಷನ್ ಅಫ್ ಟ್ಯಾಕ್ಸಸ್ ಅಡಿ ಕೇಂದ್ರ ಕರ್ನಾಟಕಕ್ಕೆ ಕೇಂದ್ರ ನೀಡುತ್ತಿರೋದು ಕೇವಲ ರೂ. 37,252 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ರೂಪದಲ್ಲಿ ರೂ. 13,005 ಕೋಟಿ ಮಾತ್ರ, ಎರಡನ್ನೂ ಸೇರಿಸಿದಾಗ ರಾಜ್ಯಕ್ಕೆ ಸಿಗೋದು ಕೇವಲ 50,000 ಕೋಟಿ ರೂ. ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah ) ಇಂದು ಸದನದಲ್ಲಿ ಮಾತಾಡುವಾಗ ರೌದ್ರಾವತಾರ ತಾಳಿದರು. ತಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ (guarantee schemes) ಬಿಜೆಪಿ ಪಕ್ಷದ ಬಡವರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಬಡವರಿಗೆ ಪ್ರಯೋಜನವಾಗುತ್ತಿದೆ ಎಂದು ಹೇಳಿದ ಸಿದ್ದರಾಮಯ್ಯ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳ ಅಧ್ಯಯನ ಮತ್ತು ಶಿಫಾರಸ್ಸುಗಳ ಮೇರೆಗೆ ರೈತರಿಗೆ ಉಪಯೋಗವಾಗಲು ಕೃಷಿಭಾಗ್ಯ ಯೋಜನೆ (Krishi Bhagya scheme) ತಮ್ಮ ಮೊದಲ ಅವಧಿಯಲ್ಲಿ ಜಾರಿ ಮಾಡಲಾಗಿತ್ತು, ಆದರೆ ರೈತರ ಬಗ್ಗೆ ಕಾಳಜಿಯಿರದ ಬಿಜೆಪಿ ಸರ್ಕಾರ, ಅದನ್ನು ಕೇವಲ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದು ಎಂಬ ಕಾರಣಕ್ಕೆ ನಿಲ್ಲಿಸಿತ್ತು ಎಂದು ಹೇಳಿದರು. ಬಿಜೆಪಿ ಜೊತೆ ಸಂಘರ್ಷ ಇಟ್ಟುಕೊಂಡಿರುವುದಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ತಮ್ಮ ಸರ್ಕಾರ ಯಾರ ಜೊತೆಯೂ ಸಂಘರ್ಷ ಇಟ್ಟುಕೊಳ್ಳಲ್ಲ, ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ತಮಗೆ ಸಿಗಬೇಕಿರುವುದನ್ನು ಕೇಳುತ್ತಿದ್ದೇವೆ ಎಂದು ಹೇಳಿದರು.

2023-24 ಸಾಲಿನಲ್ಲಿ ಕರ್ನಾಟಕದಿಂದ ತೆರಿಗೆಗಳ ಮೂಲಕ ಕೇಂದ್ರಕ್ಕೆ 4 ಲಕ್ಷ 30 ಸಾವಿರ ಕೋಟಿ ರೂ. ಹೋಗಿದೆ, ಅದರೆ ಡಿವೋಲಷನ್ ಅಫ್ ಟ್ಯಾಕ್ಸಸ್ ಅಡಿ ಕೇಂದ್ರ ಕರ್ನಾಟಕಕ್ಕೆ ಕೇಂದ್ರ ನೀಡುತ್ತಿರೋದು ಕೇವಲ ರೂ. 37,252 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ರೂಪದಲ್ಲಿ ರೂ. 13,005 ಕೋಟಿ ಮಾತ್ರ, ಎರಡನ್ನೂ ಸೇರಿಸಿದಾಗ ರಾಜ್ಯಕ್ಕೆ ಸಿಗೋದು ಕೇವಲ 50,000 ಕೋಟಿ ರೂ. ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

ಆಗ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಎದ್ದುನಿಂತು, ರಾಜ್ಯದ ಜನ ನೋಡುತ್ತಿರುತ್ತಾರೆ, ಒಂದು ಸ್ಪಷ್ಟ ಚಿತ್ರಣ ಕೊಡಿ, ಏನೇನೋ ಹೇಳಿ ಅವರ ದಾರಿ ತಪ್ಪಿಸಬೇಡಿ ಅಂದಾಗ ಸಿಡುಕುವ ಸಿದ್ದರಾಮಯ್ಯ, ಸರಿ ನಾನು ಹೇಳೋದು ಮುಗಿದ ಬಳಿಕ ನೀವು ಹೇಳಿ ಅನ್ನುತ್ತಾರೆ. ಸ್ಪೀಕರ್ ಸಹ ಮುಖ್ಯಮಂತ್ತಿಯೊಂದಿಗೆ ಧ್ವನಿಗೂಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ