Karnataka Budget Session: ಸದನದಲ್ಲಿ ಎದೆತಟ್ಟಿದ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು, ಹೈರಾಣಾದ ಸ್ಪೀಕರ್ ಯುಟಿ ಖಾದರ್
ಸ್ಪೀಕರ್ ಅಯ್ತು ಆಯ್ತು ಅನ್ನುತ್ತಿದ್ದರೆ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಮತ್ತು ಕಾಮತ್ ನಡುವೆ ಜೋರು ಜಟಾಪಟಿ ಶುರುವಾಗುತ್ತದೆ, ಎದೆ ತಟ್ಟುವುದು ತೊಡೆ ತಟ್ಟೋದು ನಡೆಯುತ್ತದೆ. ಕಾಮತ್ ಪರವಾಗಿ ಕೆಲವರು, ಸ್ವಾಮಿ ಪರವಾಗು ಕೆಲವರು ಜೋರು ಜೋರು ಸ್ವರದಲ್ಲಿ ಮಾತಾಡಲಾರಂಭಿಸಿದಾಗ ಸದನದಲ್ಲಿ ಗಲಾಟೆ ಹೆಚ್ಚುತ್ತದೆ. ಸ್ಪೀಕರ್ ಸುಮ್ಮನಿರಿ, ಕೂತ್ಕೊಳ್ಳಿ ಅಂತ ಹೇಳೋದು ಅರಣ್ಯರೋದನವೆನಿಸುತ್ತದೆ.
ಬೆಂಗಳೂರು: ಸ್ಪೀಕರ್ ಯುಟಿ ಖಾದರ್ (Speaker UT Khader) ಅವಸ್ಥೆ ನೋಡಿದರೆ, ಪ್ರಾಥಮಿಕ ಶಾಲೆಯ ಶಿಕ್ಷರೊಬ್ಬರು ತಮ್ಮ ತರಗತಿಯ ಮಕ್ಕಳನ್ನು ಗಲಾಟೆ ಮಾಡದಂತೆ ಗದರಿಸಿ ಸುಮಾನ್ನಾಗಿಸುವುದು ಹೆಚ್ಚು ಸುಲಭ ಅನಿಸುತ್ತದೆ ಮಾರಾಯ್ರೇ. ಆದರೆ ಸದನದಲ್ಲಿ ಇರೋರೆಲ್ಲ ಬೆಳೆದ ನಿಂತ ಮಕ್ಕಳು, ಅವರನ್ನು ಗದ್ದಲ ಮಾಡದಂತೆ ಸುಮ್ಮನಾಗಿಸುವುದು, ಗದರುವುದು ಹೇಗೆ? ಇಲ್ಲಿ ಗಲಾಟೆ ಯಾವ ಕಾರಣಕ್ಕೆ ಶುರುವಾಯಿತೋ ಗೊತ್ತಿಲ್ಲ ಅದರೆ ವಿರೋಧ ಪಕ್ಷದ ನಾಯಕ ಆರ್ ಆಶೋಕ (R Ashoka) ಹೇಳುವ ಪ್ರಕಾರ ಸಭಾಪತಿ ಖಾದರ್ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಗೆ (Veda Vyas Kamat) ಏಕವಚನದಲ್ಲಿ ಮಾತಾಡಿದ್ದಾರೆ. ನೀವಿಬ್ಬರು ಒಂದೇ ಜಿಲ್ಲೆಯವರಾಗಿರುವುದರಿಂದ ಸಲುಗೆಯಿಂದ ನೀವು ಹಾಗೆ ಮಾತಾಡಿರಬಹುದು, ನೀವು ಹೊರಗಡೆ ಹಾಗೆ ಮಾತಾಡಿದರೆ ಯಾರದೇನೂ ಅಭ್ಯಂತರವಿರಲ್ಲ, ಆದರೆ ಕಾಮತ್ ಒಬ್ಬ ಶಾಸಕರಾಗಿರುವುದರಿಂದ ಸಭ್ಯ ಭಾಷೆಯಲ್ಲಿ ಮಾತಾಡಬೇಕು ಅನುತ್ತಾರೆ. ಸ್ಪೀಕರ್ ಅಯ್ತು ಆಯ್ತು ಅನ್ನುತ್ತಿದ್ದರೆ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಮತ್ತು ಕಾಮತ್ ನಡುವೆ ಜೋರು ಜಟಾಪಟಿ ಶುರುವಾಗುತ್ತದೆ, ಎದೆ ತಟ್ಟುವುದು ತೊಡೆ ತಟ್ಟೋದು ನಡೆಯುತ್ತದೆ. ಕಾಮತ್ ಪರವಾಗಿ ಕೆಲವರು, ಸ್ವಾಮಿ ಪರವಾಗು ಕೆಲವರು ಜೋರು ಜೋರು ಸ್ವರದಲ್ಲಿ ಮಾತಾಡಲಾರಂಭಿಸಿದಾಗ ಸದನದಲ್ಲಿ ಗಲಾಟೆ ಹೆಚ್ಚುತ್ತದೆ. ಸ್ಪೀಕರ್ ಸುಮ್ಮನಿರಿ, ಕೂತ್ಕೊಳ್ಳಿ ಅಂತ ಹೇಳೋದು ಅರಣ್ಯರೋದನವೆನಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ