ಚಿಕ್ಕಮಗಳೂರು: ಪ್ರವಾಸಿ ತಾಣ ಕೆಮ್ಮಣ್ಣು ಗುಂಡಿ ಗುಡ್ಡದಲ್ಲಿ ಕಾಡ್ಗಿಚ್ಚು; ವಿಡಿಯೋ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪಶ್ಚಿಮಘಟ್ಟ ಭಾಗ ಹಾಗೂ ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚು ಬೀಳಲು ಆರಂಭವಾಗಿದೆ. ತರೀಕೆರೆ ತಾಲೂಕಿನ ಕೆಮ್ಮಣ್ಣು ಗುಂಡಿಯ ಗುಡ್ಡದಲ್ಲಿ ನಿನ್ನೆ (ಸೋಮವಾರ ಫೆ.19)ರ ರಾತ್ರಿ ಬೆಂಕಿ ಹೊತ್ತಿ ಉರಿದಿದೆ.
ಚಿಕ್ಕಮಗಳೂರು, ಫೆಬ್ರವರಿ 20: ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪಶ್ಚಿಮಘಟ್ಟ ಭಾಗ ಹಾಗೂ ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚು ಬೀಳಲು ಆರಂಭವಾಗಿದೆ. ತರೀಕೆರೆ ತಾಲೂಕಿನ ಕೆಮ್ಮಣ್ಣು ಗುಂಡಿಯ (Kemmannu Gundi) ಗುಡ್ಡದಲ್ಲಿ ನಿನ್ನೆ (ಸೋಮವಾರ ಫೆ.19)ರ ರಾತ್ರಿ ಬೆಂಕಿ ಹೊತ್ತಿ ಉರಿದಿದೆ. ಕಾಡ್ಗಿಚ್ಚಿಗೆ ಶೋಲಾರಣ್ಯ ಗುಡ್ಡದಲ್ಲಿ ನೂರಾರು ಎಕರೆ ಪ್ರದೇಶ ನಾಶವಾಗಿದೆ. ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. ಬೆಂಕಿಯ ಕೆನ್ನಾಲಿಗೆಗೆ ಪ್ರಾಣಿ, ಪಕ್ಷಿಗಳು ಮೃತಪಟ್ಟಿವೆ. ಕೆಮ್ಮಣ್ಣುಗುಂಡಿ ಝಡ್ ಪಾಯಿಂಟ್ ಸಮೀಪದ ಭದ್ರ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ.
Latest Videos