Karnataka Assembly Session: ರಾಜಣ್ಣ ವಜಾ; ಸಿದ್ದರಾಮಯ್ಯ ಕಾಲೆಳೆಯುವ ಪ್ರಯತ್ನ ಮಾಡಿದ ವಿಪಕ್ಷ ನಾಯಕರು
ಸತೀಶ್ ಮಾತಿಗೆ ಎದ್ದುನಿಲ್ಲುವ ಸಿದ್ದರಾಮಯ್ಯ ಯಾವ ಸಂದರ್ಭದಲ್ಲೂ ಡಲ್ಲಾಗುವ ಜಾಯಮಾನ ನನ್ನದಲ್ಲ, ಎಲ್ಲ ಪರಿಸ್ಥಿತಿಗಳಲ್ಲೂ ಸಮಚಿತ್ತವನ್ನು ಕಾಯ್ದುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಈ ಅಂಶವನ್ನು ಅಂಗೀಕರಿಸಲಿ ಅಥವಾ ತಿರಸ್ಕರಿಸಲಿ, ರಾಜಣ್ಣರ ರಾಜೀನಾಮೆ ಪಡೆದ ನಂತರ ಅವರು ಗೌಣವಾಗಿದ್ದಾರೆ, ತಾವು ಹೇಳಬೇಕಾಗಿದ್ದನ್ನು ರಾಜಣ್ಣ ಮೂಲಕ ಹೇಳಿಸುತ್ತಿದ್ದರು ಎಂದು ವಿಪಕ್ಷ ನಾಯಕರು ಅರೋಪಿಸುತ್ತಿದ್ದಾರೆ.
ಬೆಂಗಳೂರು, ಆಗಸ್ಟ್ 12: ಹಿರಿಯ ನಾಯಕ ಕೆಎನ್ ರಾಜಣ್ಣ (KN Rajanna) ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿರುವುದಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಅಧಿವೇಶನದಲ್ಲಿ ಇಂದು ವಿಪಕ್ಷ ನಾಯಕ ಆರ್ ಅಶೋಕ ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆಯುವ ಪ್ರಯತ್ನ ಮಾಡಿದರು. ಅಶೋಕ್ ವಿಷಯವೊಂದನ್ನು ಪ್ರಸ್ತಾಪಿಸುತ್ತಾ, ಮುಖ್ಯಮಂತ್ರಿಯವರ ಮಾತು ಕೇಳಬೇಕೋ ಅಥವಾ ಡಿಪಿಅರ್ ಸೆಕ್ರೆಟರಿಗಳ ಮಾತು ಕೇಳಬೇಕೋ ಗೊತ್ತಾಗುತ್ತಿಲ್ಲ ಅಂದಾಗ ಪಕ್ಕದಲ್ಲಿ ಕುಳಿತಿದ್ದ ಅರವಿಂದ್ ಬೆಲ್ಲದ್, ಮುಖ್ಯಮಂತ್ರಿಗಳ ಮಾತು ಜನಗಳೇ ಕೇಳೋದಿಲ್ಲ ಅನ್ನುತ್ತಾರೆ. ಅದಕ್ಕೆ ಅಶೋಕ, 2013 ರಿಂದ 2018ರವವರೆಗೆ ಮುಖ್ಯಮಂತ್ರಿಯಾಗಿದ್ದವರ ಮಾತು ಕೇಳಬೇಕು, ಇದನ್ನು ತಾವು ಮಾತ್ರ ಅಲ್ಲ, ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಮಂತ್ರಿಗಳು ಹೇಳುತ್ತಾರೆ ಎನ್ನುತ್ತಾರೆ. ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಯಾಕೋ ನಿನ್ನೆಯಿಂದ ಸಿಎಂ ಡಲ್ ಆಗಿದ್ದಾರೆ ಅಂತ ಹೇಳಿದಾಗ, ಉಳಿದ ಶಾಸಕರು ಧ್ವನಿಗೂಡಿಸುತ್ತಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಸದನದಲ್ಲಿ ಅಶೋಕ್ ಪ್ರಶ್ನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
