ಮಹಿಳೆ ನನ್ನ ಬಗ್ಗೆ ಏನಾದರೂ ಹೇಳಲಿ, ಆದರೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರೀ ಜಾಗವನ್ನು ತೆರವು ಮಾಡಲಿ: ಅರವಿಂದ ಲಿಂಬಾವಳಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2022 | 1:27 PM

ಆಕೆ ಕಾಂಗ್ರೆಸ್ ಕಾರ್ಯಕರ್ತೆಯಾಗಿರುವುದರಿಂದ ಪಕ್ಷದ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ, ಅದರರ್ಥ ಕಾಂಗ್ರೆಸ್ ಪಕ್ಷ ಸರ್ಕಾರಿ ಜಮೀನು ಒತ್ತುವರಿಗಳಿಗೆ ಸಪೋರ್ಟ್ ಮಾಡುತ್ತದೆ ಅಂತಾಯಿತು ಎಂದು ಲಿಂಬಾವಳಿ ಹೇಳಿದರು.

ಬೆಂಗಳೂರು: ಮಹದೇವಪುರ ನಿವಾಸಿಯಾಗಿರುವ ಮಹಿಳೆಯೊಬ್ಬರು ಆ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ತನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಮಾಡಿರುವ ಆಪಾದನೆಗೆ ಟಿವಿ9 ಕನ್ನಡ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಶಾಸಕರು, ಆಕೆ ನನ್ನ ಬಗ್ಗೆ ಏನಾದರೂ ಹೇಳಿಕೊಳ್ಳಲಿ, ಆದರೆ ಮೊದಲು ತಾನು ಅತಿಕ್ರಮಣ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು (government land) ತೆರವು ಮಾಡಲಿ ಎಂದು ಹೇಳಿದರು. ಆಕೆ ಕಾಂಗ್ರೆಸ್ (Congress) ಕಾರ್ಯಕರ್ತೆಯಾಗಿರುವುದರಿಂದ ಪಕ್ಷದ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ, ಅದರರ್ಥ ಕಾಂಗ್ರೆಸ್ ಪಕ್ಷ ಸರ್ಕಾರಿ ಜಮೀನು ಒತ್ತುವರಿಗಳಿಗೆ ಸಪೋರ್ಟ್ ಮಾಡುತ್ತದೆ ಅಂತಾಯಿತು ಎಂದು ಲಿಂಬಾವಳಿ ಹೇಳಿದರು.