ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು (KS Eshwarappa) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು (Siddaramaiah) ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ರಾಜ್ಯದ 224 ಮತಕ್ಷೇತ್ರಗಳ ಪೈಕಿ ಎಲ್ಲೇ ನಿಂತರೂ ಗೆಲ್ಲ್ಲುವುದಾಗಿ ಹೇಳಿದ್ದಾರೆ, ಹಾಗೆ ಅವಕಾಶವಿದ್ದರೆ ನಿಂತುಕೊಳ್ಳಲಿ, ಆಗಲಾದರೂ ಒಂದು ಕ್ಷೇತ್ರದಲ್ಲಿ ಗೆಲ್ಲುತ್ತಾರೇನೋ ನೋಡೋಣ ಅಂತ ಈಶ್ವರಪ್ಪ ಗೇಲಿಮಾಡಿದರು. ಸಿದ್ದರಾಮಯ್ಯ ಬಾದಾಮಿಗೆ ಹೆಲಿಕಾಪ್ಟರ್ ನಲ್ಲಿ (helicopter) ಯಾಕೆ ಬರುತ್ತಾರೆ? ಅಲ್ಲಿಗೆ ಬಸ್, ಟ್ರೇನ್ ಇಲ್ವಾ? ಅಥವಾ ತಮ್ಮಲ್ಲಿ ದುಡ್ಡು ಬೇಕಾದಷ್ಟಿದೆ ಅಂತ ತೋರಿಸಿಕೊಳ್ಳುವ ಉಮೇದಿಯಾ ಅಂತ ಈಶ್ವರಪ್ಪ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ