ಮುಡಾ ಸೇರಿದಂತೆ ಎಲ್ಲ ಹಗರಣಗಳನ್ನು ಸಿಎಂ ಸಿದ್ದರಾಮಯ್ಯನವರೇ ಸಿಬಿಐ ತನಿಖೆಗೆ ಒಪ್ಪಿಸಲಿ: ಬಿವೈ ವಿಜಯೇಂದ್ರ

ಮುಡಾ ಸೇರಿದಂತೆ ಎಲ್ಲ ಹಗರಣಗಳನ್ನು ಸಿಎಂ ಸಿದ್ದರಾಮಯ್ಯನವರೇ ಸಿಬಿಐ ತನಿಖೆಗೆ ಒಪ್ಪಿಸಲಿ: ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 16, 2024 | 2:01 PM

ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಯಾಗಬೇಕಿದೆ, ಸರ್ಕಾರೀ ಆಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸಾವಾಗುತ್ತಿದೆ, ಪಂಚಮಸಾಲಿ ಸಮುದಾಯದವರು ಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ, ಸರ್ಕಾರವಾದರೋ ಸಮಾಜಗಳ ನಡುವೆ ವಿಷಬೀಜ ಬಿತ್ತುವ ಕೆಲಸಕ್ಕೆ ಮುಂದಾಗುತ್ತಾ, ಹಿಂದೂಗಳ ಹೋರಾಟವನ್ನು ಹತ್ತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂದು ವಿಜಯೇಂದ್ರ ಹೇಳಿದರು.

ಬೆಳಗಾವಿ: ವಿಧಾನಮಂಡದಲ್ಲಿ ಇವತ್ತಿನ ಕಾರ್ಯಕಲಾಪ ಶುರುವಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇತ್ತೀಚಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಸಿಬಿಐ ಮೇಲೆ ಭಾರೀ ವಿಶ್ವಾಸ ಬಂದಂತಿದೆ; ಮುಡಾ ಹಗರಣ, ಅನ್ವರ್ ಮಣಿಪ್ಪಾಡಿ ಅವರು ವಕ್ಫ್ ಬಗ್ಗೆ ನೀಡಿರುವ ವರದಿ ಮತ್ತು ತನ್ನ ಮೇಲೆ ₹ 150 ಕೋಟಿ ಆರೋಪ-ಎಲ್ಲವನ್ನೂ ಅವರು ಸಿಬಿಐ ತನಿಖೆಗೆ ನೀಡಲಿ, ಪ್ರಧಾನ ಮಂತ್ರಿಯವರು ತನಿಖೆ ಮಾಡಿಸಲಿ ಅಂತ ಹೇಳೋದ್ಯಾಕೆ, ಮುಖ್ಯಮಂತ್ರಿಯವರ ಗೊಡ್ಡು ಬೆದರಿಕೆಗಳಿಗೆ ಹೆದರಿ ಓಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಕ್ಫ್ ಆಸ್ತಿ ವಿವಾದ: ವಿಜಯೇಂದ್ರ ವಿರುದ್ಧದ ಆರೋಪಕ್ಕೆ ಟ್ವಿಸ್ಟ್, ಸುಳ್ಳು ಹೇಳಿದ್ರಾ ಸಿದ್ದರಾಮಯ್ಯ..?