ಯುಗಾದಿ ಹಬ್ಬದ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಒಂದೇ ಸೂರಿನಡಿ ಖರೀದಿಸಲು ಟಿವಿ9 ಲೈಫ್​ಸ್ಟೈಲ್ ಎಕ್ಸ್​ಪೋ ಅರಂಭಗೊಂಡಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 26, 2022 | 5:13 PM

ಟಿವಿ9 ಕನ್ನಡ ವಾಹಿನಿ ಪ್ರಾಯೋಜಿಸುತ್ತಿರುವ ಲೈಫ್ ಸ್ಟೈಲ್ ಎಕ್ಸ್​ಪೋ (Lifestyle Expo) ನಿನ್ನೆಯಿಂದ (ಶುಕ್ರವಾರ) ಆರಂಭವಾಗಿದ್ದು ನಾಳೆ (ರವಿವಾರ) ಕೊನೆಗೊಳ್ಳಲಿದೆ. ಶುಕ್ರವಾರದಂದು ಕನ್ನಡದ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಅವರು ಎಕ್ಸ್ ಪೋಗೆ ಚಾಲನೆ ನೀಡಿದರು.

ಬೆಂಗಳೂರು ಜನತೆಗೆ ಉಗಾದಿ ಹಬ್ಬದ (Ugadi Festival) ಸಂದರ್ಭದಲ್ಲಿ ವಿವಿಧ ಗೃಹಬಳಕೆ, ಎಲೆಕ್ಟ್ರಾನಿಕ್ ವಸ್ತುಗಳು, ಅಟೋಮೋಬೈಲ್, ಪೀಠೋಪಕರಣಗಳು, ಆಹಾರ ಮತ್ತು ತಿಂಡಿ ಪದಾರ್ಥಗಳು, ಕಾಸ್ಮೆಟಿಕ್ಸ್, ಬಟ್ಟೆ, ಆರೋಗ್ಯಕ್ಕೆ ಸಂಬಂಧಿಸಿದ ತಯಾರಿಕೆಗಳು ಮತ್ತು ಇನ್ನೂ ಹಲವಾರು ಸಾಮಾನುಗಳು ಮತ್ತು ಪದಾರ್ಥಗಳು ಒಂದೇ ಸೂರಿನಡಿ (under one roof) ಖರೀದಿಸಲು ಟಿವಿ9 ಕನ್ನಡ ವಾಹಿನಿ ಒಂದು ಸುವರ್ಣಾವಕಾಶನ್ನು ನಿಮಗೆ ಕಲ್ಪಿಸುತ್ತಿದೆ. ಹೌದು, ಟಿವಿ9 ಕನ್ನಡ ವಾಹಿನಿ ಪ್ರಾಯೋಜಿಸುತ್ತಿರುವ ಲೈಫ್ ಸ್ಟೈಲ್ ಎಕ್ಸ್​ಪೋ (Lifestyle Expo) ನಿನ್ನೆಯಿಂದ (ಶುಕ್ರವಾರ) ಆರಂಭವಾಗಿದ್ದು ನಾಳೆ (ರವಿವಾರ) ಕೊನೆಗೊಳ್ಳಲಿದೆ. ಶುಕ್ರವಾರದಂದು ಕನ್ನಡದ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಅವರು ಎಕ್ಸ್ ಪೋಗೆ ಚಾಲನೆ ನೀಡಿದರು.

ಆಗಲೇ ಹೇಳಿದಂತೆ ಎಲ್ಲಾ ಬಗೆಯ ವಸ್ತಗಳು ಇಲ್ಲಿ ಸಿಗುತ್ತಿವೆ. ಈ ವಿಡಿಯೋವನ್ನು ಶನಿವಾರ ಬೆಳಗ್ಗೆ ಶೂಟ್ ಮಾಡಲಾಗಿದೆ. ಆಗಲೇ ಜನ ಖರೀದಿಗೆ ಆಗಮಿಸಿದ್ದಾರೆ. ಶುಕ್ರವಾರ ಸಂಜೆ ಬಹಳ ಜನ ಇಲ್ಲಿಗೆ ಆಗಮಿಸಿದ್ದರು. ವಾರಾಂತ್ಯ ಆಗಿರುವುದರಿಂದ ಶನಿವಾರ ಸಾಯಂಕಾಲ ಮತ್ತು ರವಿವಾರ ಇಡೀ ದಿನ ಹೆಚ್ಚು ಜನ ಬರಲಿದ್ದಾರೆ.

ಇಲ್ಲಿ ಮಳಿಗೆಗಳನ್ನು ಹಾಕಿರುವ ವ್ಯಾಪಾರಸ್ಥರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಟಿವಿ9 ಬೆಂಗಳೂರು ಪ್ರತಿನಿಧಿ ಗ್ರಾಹಕರು ಮತ್ತು ವ್ಯಾಪಾರಿಗಳೊಂದಿಗೆ ಮಾತಾಡಿ ಅವರ ಪ್ರತಿಕ್ರಿಯೆಗಳನ್ನು ಕೇಳಿದ್ದಾರೆ. ಎಕ್ಸ್​ಪೋ ತ್ರಿಪುರವಾಸಿನಿ, ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ನೀವು ಪ್ರವೇಶ ಶುಲ್ಕ ಭರಿಸಬೇಕಿಲ್ಲ ಮತ್ತು ಪಾರ್ಕಿಂಗ್ ಗೋಸ್ಕರವೂ ಹಣ ತೆರಬೇಕಿಲ್ಲ, ಅವರೆಡೂ ಉಚಿತ.

ಹಬ್ಬದ ಸಮಯವಾಗಿರುವುದರಿಂದ ಕುಟುಂಬ ಮತ್ತು ಮಕ್ಕಳೊಂದಿಗೆ ಭೇಟಿ ನೀಡಿ ನಿಮಗೆ ಬೇಕಿರುವ ವಸ್ತುಗಳನ್ನು ಖರೀದಿಸಿ.

ಇದನ್ನೂ ಓದಿ: Viral Video: ವೇಗವಾಗಿ ಬರುತ್ತಿದ್ದ ರೈಲಿನ ಎದುರು ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಪ್ರಾಣ ಉಳಿಸಿದ ಪೊಲೀಸ್; ವಿಡಿಯೋ ವೈರಲ್