ಬಿಗ್​ ಬಾಸ್​ ಕನ್ನಡ: ಮತ್ತೆ ನಾಲಿಗೆ ಹರಿಬಿಟ್ಟ ಲಿಖಿತ್; ಈ ವಿಷಯಕ್ಕೆ ಸುದೀಪ್ ಕ್ಲಾಸ್ ಫಿಕ್ಸ್?

Edited By:

Updated on: Sep 22, 2026 | 9:13 AM

ಕಿಚ್ಚ ಸುದೀಪ್ ಅವರು ಅಗ್ನಿಪರೀಕ್ಷೆ ಸ್ಪರ್ಧಿಗಳಿಗೆ ಸಾಕಷ್ಟು ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಕೆಲವರು ಬದಲಾಗಬಹುದು ಎನ್ನುವ ನಿರೀಕ್ಷೆ ಇತ್ತು. ಕಿರಣ್ ಶಾಸ್ತ್ರಿ ಹೊರತುಪಡಿಸಿ ಎಲ್ಲರೂ ಹಾಗೆಯೇ ಇದ್ದಾರೆ. ಈಗ ಲಿಖಿತ್ ಅವರು ಮತ್ತೆ ತೊಂದರೆ ಅನುಭವಿಸುವ ಸೂಚನೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಕಾಮನ್ ಮ್ಯಾನ್​​ಗಳಾದ ಲಿಖಿತ್, ಕಿರಣ್, ಮಂಜು ಹಾಗೂ ಧನುಷ್​ಗೆ ಕ್ಲಾಸ್ ತೆಗೆದುಕೊಳ್ಳಲಾಯಿತು. ಈಗ ಕಿರಣ್ ಶಾಸ್ತ್ರಿ ಬದಲಾಗಿದ್ದಾರೆ. ಆದರೆ, ಮಂಜು ಹಾಗೂ ಲಿಖಿತ್ ಅವರಿಂದ ಬದಲಾವಣೆ ನಿರೀಕ್ಷೆ ಅಸಾಧ್ಯ ಎಂಬಂತಾಗಿದೆ. ಬಿಗ್ ಬಾಸ್ ಮನೆಯ ಕೆಲಸವನ್ನು ಎಲ್ಲರೂ ಹಂಚಿಕೊಂಡು ಮಾಡಬೇಕು. ಆದರೆ, ಲಿಖಿತ್ ಅವರು ಆ ರೀತಿ ಮಾಡುತ್ತಿಲ್ಲ. ಬಿಗ್ ಬಾಸ್​​ನಲ್ಲಿ ಆಟ ಆಡಲು ಬಂದಿದ್ದು, ಕೆಲಸ ಮಾಡೋಕೆ ಅಲ್ಲ ಎಂಬ ಭಾವನೆ ಅವರಿಗೆ ಇದೆ. ಹಾಗೆಯೇ ಬಾಯ್ಬಿಟ್ಟು ಹೇಳಿದ್ದಾರೆ. ಪಾತ್ರೆಗಳೆಲ್ಲ ತೊಳೆಯದೆ ಹಾಗೆಯೇ ಇದೆ ಎಂದು ಹೇಳಿದಾಗ, ‘ನಾನೇನು ಇಲ್ಲಿ ಕೆಲಸ ಮಾಡೋಕೆ ಬಂದಿದ್ದೀನಾ’ ಎಂದು ಪ್ರಶ್ನೆ ಮಾಡಿದ್ದಾರೆ. ವೀಕೆಂಡ್​​ನಲ್ಲಿ ಈ ವಿಷಯಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Sep 22, 2026 08:40 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More