ರಾಜ್ಯದ ಲಿಂಗಾಯತ ಮಂತ್ರಿಗಳು ಸ್ವಾರ್ಥಿಗಳು, ನಾಚಿಕೆಯಾಗೆಬೇಕು ಅವರಿಗೆ: ಶಿವಗಂಗಾ ಬಸವರಾಜ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Apr 16, 2025 | 12:56 PM

ಜಾತಿ ಗಣತಿ ನಮ್ಮ ಪ್ರಣಾಳಿಕೆಯಲ್ಲಿತ್ತು ಹಾಗಾಗಿ ಅದನ್ನು ಜಾರಿಗೆ ತರಲೇಬೇಕು, ಅದು ಬೇರೆ ವಿಚಾರ, ಎಂದು ಹೇಳಿದ ಬಸವರಾಜ, ಆದರೆ ಯಾವೆಲ್ಲ ಸಮುದಾಯಗಳಿಗೆ ಅನ್ಯಾಯವಾಗಿದೆ ಅಂತ ಚರ್ಚೆಯಾಗಬೇಕಿದೆ, ಒಕ್ಕಲಿಗೆ ಮತ್ತು ಲಿಂಗಾಯತ ಸಮುದಾಯಗಳಿಗೆ ಅನ್ಯಾಯವಾಗಿದೆ ಅಂತ ಗೊತ್ತಾಗಿದೆ, ಎಲ್ಲರಿಗೂ ನ್ಯಾಯಯುತವಾದ ಪ್ರಾತಿನಿಧ್ಯ ಸಿಗಬೇಕು ಎಂದರು.

ದಾವಣಗೆರೆ, ಏಪ್ರಿಲ್ 16: ಚನ್ನಗಿರಿಯ ಶಿವಗಂಗಾ ಬಸವರಾಜ ಕಾಂಗ್ರೆಸ್ ಪಕ್ಷದ ಕಿರಿಯ ಶಾಸಕರಲ್ಲಿ ಒಬ್ಬರು. ಜಾತಿ ಗಣತಿಯ (Caste Census) ಬಗ್ಗೆ ಅವರು ತಮ್ಮ ಅಸಮಾಧಾನವನ್ನು ಪದೇಪದೆ ಹೊರಹಾಕುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿರುವ ಲಿಂಗಾಯತ ಮಂತ್ರಿಗಳ ವಿರುದ್ಧ ಕಿಡಿಕಾರಿದ ಅವರು, ಜಾತಿ ಗಣತಿಯ ಬಗ್ಗೆ ಚರ್ಚೆ ಶುರುವಾದಾಗಿನಿಂದ ಬೇರೆ ಮಂತ್ರಿಗಳು ತಮ್ಮ ಸಮುದಾಯದ ಶಾಸಕರನ್ನು ಮತ್ತು ಮುಖಂಡರನ್ನು ಕರೆದು ಚರ್ಚೆ ಮಾಡಿದ್ದಾರೆ, ಅದರೆ ಒಬ್ಬ ಲಿಂಗಾಯತ ಮಂತ್ರಿಯೂ ಇದುವರೆಗೆ ಅದನ್ನು ಮಾಡಲಿಲ್ಲ, ನಾಚಿಕೆಯಾಗಬೇಕು ಅವರಿಗೆ, ಇಷ್ಟೊಂದು ಸ್ವಾರ್ಥ ಅವರಲ್ಲಿರಬಾರದು, ಈಶ್ವರ್ ಖಂಡ್ರೆಯವರಿಗೆ ಫೋನ್ ಮಾಡಿದರೆ ಅವರು ರಿಸೀವ್ ಮಾಡಲ್ಲ ಎಂದು ಹೇಳಿದರು.

ಇದನ್ನೂ ಓದಿ:  ಜಾತಿ ಗಣತಿ ವರದಿ: ಡಿಸಿಎಂ ಡಿಕೆ ಶಿವಕುಮಾರ್​ಗೆ ಮಹತ್ವದ ಬೇಡಿಕೆ ಇಟ್ಟ ಒಕ್ಕಲಿಗ ಶಾಸಕರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.