ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಮೂರು ಬೆಕ್ಕುಗಳನ್ನು ಹಿಡಿದುಕೊಂಡು ಮೊಣಕಾಲು ಆಳದ ನೀರಿನ ಮೂಲಕ ಹುಡುಗ ದಡದತ್ತ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. 22 ಸೆಕೆಂಡುಗಳ ವಿಡಿಯೋ ಕ್ಲಿಪ್ ನೀರಿನಿಂದ ತುಂಬಿದ ರಸ್ತೆಯಲ್ಲಿ ದಾರಿತಪ್ಪಿ ಬಿದ್ದಿದ್ದ ಬೆಕ್ಕುಗಳನ್ನು ಆತ ಕಾಪಾಡಿದ್ದಾನೆ.
ಮಲೇಷ್ಯಾದ ಪ್ರವಾಹ ಪೀಡಿತ ಪ್ರದೇಶದಿಂದ ಹೃದಯಸ್ಪರ್ಶಿ ವಿಡಿಯೋ ಹೊರಹೊಮ್ಮಿದೆ. ಚಿಕ್ಕ ಬಾಲಕನೊಬ್ಬ ಪ್ರವಾಹದ ನೀರಿಗೆ ಇಳಿದು 3 ಸಣ್ಣ ಬೆಕ್ಕಿನ ಮರಿಗಳನ್ನು ಕಾಪಾಡಿದ್ದಾನೆ. ಮೂರು ಬೆಕ್ಕುಗಳನ್ನು ಹಿಡಿದುಕೊಂಡು ಮೊಣಕಾಲು ಆಳದ ನೀರಿನ ಮೂಲಕ ಹುಡುಗ ದಡದತ್ತ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. 22 ಸೆಕೆಂಡುಗಳ ವಿಡಿಯೋ ಕ್ಲಿಪ್ ನೀರಿನಿಂದ ತುಂಬಿದ ರಸ್ತೆಯಲ್ಲಿ ದಾರಿತಪ್ಪಿ ಬಿದ್ದಿದ್ದ ಬೆಕ್ಕುಗಳನ್ನು ಆತ ಕಾಪಾಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಮಗು ತನ್ನ ಪ್ರಯತ್ನಕ್ಕೆ ಪ್ರಶಂಸೆ ಗಳಿಸುತ್ತಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ