LIVE: ದಾವಣಗೆರೆಯಲ್ಲಿ ವೀರಶೈವ ಪೀಠಾಚಾರ್ಯರ ಶೃಂಗ ಸಭೆ, ನೇರಪ್ರಸಾರ

Edited By:

Updated on: Jul 21, 2025 | 12:04 PM

ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವೀರಶೈವ ಪಂಚ ಪೀಠಾಧಿಪತಿಗಳ ಶೃಂಗಸಭೆ ಒಂದು ಐತಿಹಾಸಿಕ ಸಮಾವೇಶವಾಗಿದೆ. ರಂಭಾಪುರಿ, ಉಜ್ಜೈನಿ, ಕೇದಾರ, ಕಾಶಿ ಮತ್ತು ಶ್ರೀಶೈಲ ಪೀಠಗಳು ಒಂದಾಗುತ್ತಿವೆ. ಸಂಸ್ಕೃತಿ ಸಂವರ್ಧನೆ ಮತ್ತು ಧಾರ್ಮಿಕ ಏಕತೆಯ ಸಂದೇಶವನ್ನು ಈ ಸಭೆ ವ್ಯಕ್ತಪಡಿಸಲಿದೆ. 500 ಕ್ಕೂ ಹೆಚ್ಚು ಮಠಾಧೀಶರು ಮತ್ತು 25,000 ಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ದಾವಣಗೆರೆ, ಜುಲೈ 21: ನಗರದಲ್ಲಿ ಇಂದಿನಿಂದ 2 ದಿನ ವೀರಶೈವ ಪೀಠಾಚಾರ್ಯರ ಶೃಂಗ ಸಭೆ (Veerashiva Summit) ಆಯೋಜನೆ ಮಾಡಲಾಗಿದೆ. ಆ ಮೂಲಕ ಪಂಚ ಪೀಠಾಧಿಪತಿಗಳ ಸಮಾಗಮವಾಗಲಿದೆ. ಶೃಂಗಸಭೆಯಲ್ಲಿ ವಿವಿಧ ರಾಜ್ಯಗಳಿಂದ 500ಕ್ಕೂ ಅಧಿಕ ಮಠಾಧೀಶರು ಭಾಗಿ ಆಗಲಿದ್ದಾರೆ. ಸಂಸ್ಕೃತಿ ಸಂವರ್ಧನೆಗಾಗಿ ಪಂಚ ಪೀಠಾಚಾರ್ಯರ ಪಾದಯಾತ್ರೆ ಮಾಡಲಿದ್ದಾರೆ. ಪಂಚ ಪೀಠಾಧಿಪತಿಗಳ ಸಮಾಗಮ ನೇರಪ್ರಸಾರ ಇಲ್ಲಿ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 21, 2025 12:03 PM
Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More