ಕೇವಲ ರೂ. 500 ಸಾಲದ ಕಂತು ಕಟ್ಟಲು ವಿಳಂಬವಾಗಿದ್ದಕ್ಕೆ ಮಹಿಳೆಯನ್ನು ನಿಂದಿಸಿದ ಐಡಿಎಫ್ ಸಿ ಬ್ಯಾಂಕ್ ವಸೂಲಾತಿ ಏಜೆಂಟ್!
ಕೊಳ್ಳಘಟ್ಟದ ಒಬ್ಬ ರೈತ ಮಹಿಳೆ ಸಾಲ ಪಡೆದು ಕೇವಲ ರೂ. 500 ಕಂತು ಕಟ್ಟಲು ತಡಮಾಡಿದ್ದಕ್ಕೆ ಸಾಲ ವಸೂಲಾತಿ ಏಜೆಂಟ್ ‘ಕಂತು ಕಟ್ಟು ಇಲ್ಲಾಂದ್ರೆ ಸಾಯಿ, ಸತ್ತರೆ ಸಾಲ ಮನ್ನಾ ಆಗುತ್ತದೆ’ ಎಂದು ಗದರುತ್ತಿದ್ದಾನೆ.
ಮೈಸೂರು: ಖಾಸಗಿ ಬ್ಯಾಂಕ್ ಗಳು (private banks) ಮತ್ತು ಹಣಕಾಸು ಸಂಸ್ಥೆಗಳು (NBFC) ಸಾಲ ಪಡೆದ ಜನ ಕಂತು ಕಟ್ಟುವುದು ತಡವಾದರೆ ಸಿಬ್ಬಂದಿ ಅವರೊಂದಿಗೆ ಹೇಗೆ ಮಾತಾಡುತ್ತಾರೆ ಅನ್ನೋದಿಕ್ಕೆ ಈ ವಿಡಿಯೋ ಸಾಕ್ಷಿ. ಜಿಲ್ಲೆಯ ಹುಣಸೂರಿನಲ್ಲಿರುವ ಐಡಿಎಫ್ ಸಿ ಬ್ಯಾಂಕಿನ (IDFC Bank) ಶಾಖೆಯೊಂದರಿಂದ ಅದೇ ತಾಲ್ಲೂಕಿನ ಕೊಳ್ಳಘಟ್ಟದ ಒಬ್ಬ ರೈತ ಮಹಿಳೆ ಸಾಲ ಪಡೆದು ಕೇವಲ ರೂ. 500 ಕಂತು ಕಟ್ಟಲು ತಡಮಾಡಿದ್ದಕ್ಕೆ ಸಾಲ ವಸೂಲಾತಿ ಏಜೆಂಟ್ ‘ಕಂತು ಕಟ್ಟು ಇಲ್ಲಾಂದ್ರೆ ಸಾಯಿ, ಸತ್ತರೆ ಸಾಲ ಮನ್ನಾ ಆಗುತ್ತದೆ’ ಎಂದು ಗದರುತ್ತಿದ್ದಾನೆ. ಅವನ ವರಸೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದಾರೆ.