ಕೆರೆಕೋಡಿಯಲ್ಲಿ ಬೈಕ್ ಕೊಚ್ಚಹೋಗದಂತೆ ತಡೆಯಲ ಸವಾರ ಪ್ರಯತ್ನಿಸುತ್ತಿದ್ದರೆ ದೂರದಲ್ಲಿ ನಿಂತ ಜನರಿಗೆ ಅದು ತಮಾಷೆ!
ಸ್ಥಳೀಯರು ಅವನ ರಕ್ಷಣೆಗೆ ಹೋಗದೆ ಇದ್ದಿದ್ದರೆ ಅವನ ಬೈಕ್ ನೀರಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇತ್ತಂತೆ. ಆದರೆ, ಜನ ನೆರವಿಗೆ ಧಾವಿಸಿ ವಾಹನ ಮಾತ್ರವಲ್ಲದೆ ಅವನನ್ನು ಸುರಕ್ಷಿತ ಸ್ಥಳಕ್ಕೆ ಎಳೆತಂದಿದ್ದಾರೆ.
ಹಾಸನ ಜಿಲ್ಲೆಯಲ್ಲೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಜನ ತಾಪತ್ರಯ ಪಡುತ್ತಿದ್ದಾರೆ. ರೈತರ ಮೊಗದಲ್ಲಿ ವಿಷಾದ ಮನೆ ಮಾಡಿದೆ. ಚಳಿಗಾಲದ ಹೆಚ್ಚು ಕಡಿಮೆ ಎರಡು ತಿಂಗಳ ಮುಗಿಯುತ್ತಾ ಬಂದರೂ ಮಳೆ ಸುರಿಯುವುದು ನಿಲ್ಲುತ್ತಿಲ್ಲ. ಯಾವಾಗ ನಿಂತೀತು ಅನ್ನುವ ಬಗ್ಗೆ ಖಾತ್ರಿ ಇಲ್ಲ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಅದರಿಂದ ಯಾವಾಗ ಮುಕ್ತಿ ಸಿಕ್ಕೀತು ಅಂತ ಜನ ಬೇಸರದಿಂದ ಎದುರು ನೋಡುತ್ತಿದ್ದಾರೆ. ಹಾಸನ ಜಿಲ್ಲೆಯ ಬಗ್ಗೆ ನಾವು ಚರ್ಚೆ ಆರಂಭಿಸಿರುವುದಕ್ಕೆ ಕಾರಣವಾಗಿರೋದು ನಿಮಗಿಲ್ಲಿ ಕಾಣುತ್ತಿರುವ ವಿಡಿಯೋ. ಅಂದಹಾಗೆ ಈ ವಿಡಿಯೋ ಹಾಸನ ಜಿಲ್ಲೆ ಚನ್ನರಾಯಪಟ್ಟನ ತಾಲ್ಲೂಕಿನ ಬಾಗೂರು ಹೆಸರಿನ ಗ್ರಾಮನಲ್ಲಿ ಶೂಟ್ ಆಗಿರೋದು. ಬೈಕ್ ಸವಾರನ ಪರದಾಟಕ್ಕಿಂತ ಮೊದಲ ಈ ಊರಲ್ಲಿರುವ ಕೆರೆಯ ಸ್ಥಿತಿಯನ್ನೊಮ್ಮೆ ನೋಡಿ. ಇದನ್ನು ದೊಡ್ಡಕೆರೆ ಎನ್ನುತ್ತಾರೆ. ಮಳೆಯ ಆರ್ಭಟಕ್ಕೆ ಕೆರೆ ತುಂಬಿ ನೀರು ಹೊರಗೆ ಹರಿಯುತ್ತಿದೆ. ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತಿರುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆ.
ಈಗ ಬೈಕ್ ಸವಾರನ ವಿಷಯಕ್ಕೆ ಬರುವ. ಅಸಲಿಗೆ ಅವನು ಹರಿಯುತ್ತಿರುವ ನೀರಿನಲ್ಲಿ ರಸ್ತೆ ದಾಟುವ ಪ್ರಯತ್ನ ಮಾಡಿದ್ದಾನೆ. ಆದರೆ, ನೀರಿನ ಸೆಳೆತಕ್ಕೆ ಆಚೆ ಹೋಗದೆ ಮತ್ತು ವಾಪಸ್ಸು ಕೂಡ ಬರಲಾಗದೆ ಒದ್ದಾಡಿದ್ದಾನೆ. ಸ್ಥಳೀಯರು ಅವನ ರಕ್ಷಣೆಗೆ ಹೋಗದೆ ಇದ್ದಿದ್ದರೆ ಅವನ ಬೈಕ್ ನೀರಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇತ್ತಂತೆ. ಆದರೆ, ಜನ ನೆರವಿಗೆ ಧಾವಿಸಿ ವಾಹನ ಮಾತ್ರವಲ್ಲದೆ ಅವನನ್ನು ಸುರಕ್ಷಿತ ಸ್ಥಳಕ್ಕೆ ಎಳೆತಂದಿದ್ದಾರೆ.
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಅಂತ ಹೇಳುತ್ತಾರಲ್ಲ? ಇಲ್ಲಿನ ಪರಿಸ್ಥಿತಿಯೂ ಹಾಗಿದೆ. ಬೈಕ್ ಸವಾರ ಜನರ ಜೊತೆ ಸೇರಿ ವಾಹನವನ್ನು ಎಳೆದು ತರುವ ಪ್ರಯತ್ನದಲ್ಲಿದ್ದರೆ, ಈಚೆ ಬದಿ ನಿಂತವರು, ಹೋಯ್ತೋ ಹೋಯ್ತು ಅಂತ ಕೇಕೆ ಹಾಕುತ್ತಿದ್ದಾರೆ!
ಇದನ್ನೂ ಓದಿ: ‘ಮನಿಕೆ ಮಗೆ ಹಿತೆ’ ರೀಲ್ಸ್ ಮಾಡುವಂತೆ ದುಂಬಾಲು ಬಿದ್ದ ಅಭಿಮಾನಿಗಳ ಆಸೆ ನೆರವೇರಿಸಿದ ನಟಿ; ವಿಡಿಯೋ ನೋಡಿ