ತರಕಾರಿ ಕೊಳ್ಳಲು ಸಿಗ್ನಲ್​​ನಲ್ಲೇ ರೈಲು ನಿಲ್ಲಿಸಿದ ಹೋದ ಲೋಕೋ ಪೈಲಟ್!

Updated on: Dec 13, 2025 | 9:19 PM

ತರಕಾರಿ ಖರೀದಿಸಲು ರೈಲು ಎಂಜಿನ್ ಅನ್ನು ಸಿಗ್ನಲ್​​ನಲ್ಲಿ ನಿಲ್ಲಿಸಿರುವುದನ್ನು ತೋರಿಸುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದನ್ನೇನು ಬಸ್, ಕಾರು ಎಂದುಕೊಂಡಿದ್ದಾರಾ? ಅದು ಹೇಗೆ ಸಿಕ್ಕ ಕಡೆಗೆಲ್ಲ ನಿಲ್ಲಿಸಿ ಹೋಗುತ್ತಾರೆ? ಎಂದು ನೆಟ್ಟಿಗರು ಈ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಖೈರಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಟಪ್ಪಾ ಖಜುರಿಯಾ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ.

ನವದೆಹಲಿ, ಡಿಸೆಂಬರ್ 13: ತರಕಾರಿ ಖರೀದಿಸಲು ರೈಲು ಎಂಜಿನ್ ಅನ್ನು ಸಿಗ್ನಲ್​​ನಲ್ಲಿ ನಿಲ್ಲಿಸಿರುವುದನ್ನು ತೋರಿಸುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿದೆ. ಅದನ್ನೇನು ಬಸ್, ಕಾರು ಎಂದುಕೊಂಡಿದ್ದಾರಾ? ಅದು ಹೇಗೆ ಸಿಕ್ಕ ಕಡೆಗೆಲ್ಲ ನಿಲ್ಲಿಸಿ ಹೋಗುತ್ತಾರೆ? ಎಂದು ನೆಟ್ಟಿಗರು ಈ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಖೈರಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಟಪ್ಪಾ ಖಜುರಿಯಾ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ. ಅಲ್ಲಿನ ಪ್ರಯಾಣಿಕರು ಇಡೀ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More