ಸಣ್ಣ ನೀರಾವರಿ ಇಲಾಖೆ ಜೆಇ ಆಗಿ ಕೆಲಸ ಮಾಡುವ ರವೀಂದ್ರ ಮನೆ ಮೇಲೆ ಲೋಕಾಯುಕ್ತ ದಾಳಿ, ದಾಖಲೆ ಪರಿಶೀಲನೆ

|

Updated on: Jan 08, 2025 | 10:59 AM

ಸರ್ಕಾರದ ಎಲ್ಲ ಇಲಾಖೆಗಳು ಭ್ರಷ್ಟ ಅಧಿಕಾರಿಗಳಿಗೆ ಪ್ರಶಸ್ತವಾಗಿ ಮೇಯುವ ಅವಕಾಶ ಕಲ್ಪಿಸುತ್ತವೆ, ಆದರಲ್ಲೂ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಪ್ರಮಾಣ ಹೆಚ್ಚು. ಮದುವೆ ವಯಸ್ಸಿನ ಹೆಣ್ಣಮಕ್ಕಳನ್ನು ಹೆತ್ತ ಪೋಷಕರು ಸರ್ಕಾರಿ ನೌಕರಸ್ಥನನ್ನು ಅಳಿಯನಾಗಿ ಮಾಡಿಕೊಳ್ಳಲು ತವಕ ಪಡುವುದಕ್ಕೆ ಪ್ರಾಯಶಃ ಇದೂ ಒಂದು ಕಾರಣವಿರಬಹುದು. ಹಾಗಂತ ಎಲ್ಲ ಸರ್ಕಾರೀ ನೌಕರರು ಭ್ರಷ್ಟರಲ್ಲ.

ಬೀದರ್: ಜಿಲ್ಲೆಯ ಬಸವಕಲ್ಯಾಣದ ಸಣ್ಣ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಇಂಜಿನೀಯರ್ ಆಗಿ ಕೆಲಸ ಮಾಡುವ ರವೀಂದ್ರ ಅವರ ಮನೆಯ ಮೇಲೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರವೀಂದ್ರ ಬಸವಕಲ್ಯಾಣದಲ್ಲಿ ಕೆಲಸ ಮಾಡುತ್ತಿದ್ದರೂ ಮನೆಯನ್ನು ಬೀದರ್​​ನ ಚಿಕ್ಕಪೇಟೆಯಲ್ಲಿ ಕಟ್ಟಿಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರವೀಂದ್ರರ ಅಸ್ತಿಪಾಸ್ತಿಗಳ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬೆಂಗಳೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ: ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾ