Nelamangala: ಲಂಚ ಸ್ವೀಕರಿಸುತ್ತಿದ್ದ ಅಗಳಕುಪ್ಪೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕಾಯಕ್ತ ಅಧಿಕಾರಿಗಳ ಬಲೆಗೆ

Nelamangala: ಲಂಚ ಸ್ವೀಕರಿಸುತ್ತಿದ್ದ ಅಗಳಕುಪ್ಪೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕಾಯಕ್ತ ಅಧಿಕಾರಿಗಳ ಬಲೆಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 08, 2023 | 1:17 PM

ನರಸಿಂಹಮೂರ್ತಿ ನೆಲಮಂಗಲದ ಪ್ರವಾಸಿ ಮಂದಿರದಲ್ಲಿ ವ್ಯವಹಾರ ಕುದುರಿಸುವಾಗ ಲೋಕಾಯುಕ್ತ ಡಿವೈ ಎಸ್ ಪಿ ರೇಣುಕಾಪ್ರಸಾದ್ ನೇತೃತ್ವದ ತಂಡ ದಾಳಿ ನಡೆಸಿದೆ.

ನೆಲಮಂಗಲ: ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತ (Lokayukta) ದಾಳಿಗಳು ನಿಸ್ಸಂದೇಹವಾಗಿ ಹೆಚ್ಚುತ್ತಿವೆ. ತಾಲ್ಲೂಕಿನ ಅಗಳಕುಪ್ಪೆ ಗ್ರಾಮ ಪಂಚಾಯಿತಿಯ ಪಿಡಿಓ (PDO) ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಲೇಟೆಸ್ಟ್ ಸರ್ಕಾರೀ ನೌಕರ. ಮೂಲಗಳ ಪ್ರಕಾರ ಪಿಡಿಓ ನರಸಿಂಹಮೂರ್ತಿ (Narasimha Murthy) ಖಾತೆ ಮಾಡಿಕೊಡಲು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದಾಳಿ ನಡೆದಾಗ ಅವರ ಬಳಿ ರೂ. 2 ಲಕ್ಷ ಹಣವಿತ್ತು. ನರಸಿಂಹಮೂರ್ತಿ ನೆಲಮಂಗಲದ ಪ್ರವಾಸಿ ಮಂದಿರದಲ್ಲಿ ವ್ಯವಹಾರ ಕುದುರಿಸುವಾಗ ಲೋಕಾಯುಕ್ತ ಡಿವೈ ಎಸ್ ಪಿ ರೇಣುಕಾಪ್ರಸಾದ್ ನೇತೃತ್ವದ ತಂಡ ದಾಳಿ ನಡೆಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ