Gruha Lakshmi Application:: ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ ಮಾಡಿದ ಸರ್ಕಾರ, ಅರ್ಜಿಯಲ್ಲಿ ಸಿಎಂ, ಡಿಸಿಎಮ್ ಮತ್ತು ಸಚಿವೆಯ ಫೋಟೋಗಳು!

Gruha Lakshmi Application:: ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ ಮಾಡಿದ ಸರ್ಕಾರ, ಅರ್ಜಿಯಲ್ಲಿ ಸಿಎಂ, ಡಿಸಿಎಮ್ ಮತ್ತು ಸಚಿವೆಯ ಫೋಟೋಗಳು!

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Jun 08, 2023 | 11:52 AM

ಅರ್ಜಿಯಲ್ಲಿ ಮಹಿಳೆಯರು ತಮ್ಮ ಮತ್ತು ಪತಿಯ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯ ವಿವರಗಳನ್ನು ಭರ್ತಿಮಾಡುವ ಜೊತೆಗೆ ಪ್ರತಿಗಳನ್ನು ಲಗತ್ತಿಸಬೇಕು

ಬೆಂಗಳೂರು: ಗೃಹಲಕ್ಷ್ಮೀ ಯೋಜನೆ (Gruhalakshmi scheme) ಬಗ್ಗೆ ವಾದ ವಿವಾದಗಳು ಜಾರಿಯಲ್ಲಿರುವಾಗಲೇ ರಾಜ್ಯ ಸರ್ಕಾರ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ) ಅರ್ಹ ಮಹಿಳೆಯರು ಸಲ್ಲಿಸಬೇಕಿರುವ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಭೌತಿಕ ಅರ್ಜಿ ನಮೂನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಫೋಟೋಗಳಿರುವುದು ಅಚ್ಚರಿ ಹುಟ್ಟಿಸುತ್ತದೆ. ಪೋಟೋಗಳ ಅವಶ್ಯಕತೆ ಇತ್ತೇ ಅನ್ನೋದು ಮೂಲಭೂತ ಪ್ರಶ್ನೆ. ವ್ಯಕ್ತಿಪೂಜೆಯನ್ನು ವಿರೋಧಿಸುವ ಕಾಂಗ್ರೆಸ್ ನಾಯಕರು ತಾವು ಸಹ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಆ ವಿಷಯದ ಚರ್ಚೆ ಈಗ ಬೇಡ. ಗ್ರಹಲಕ್ಷ್ಮಿ ಯೋಜನೆ ಅರ್ಜಿಯಲ್ಲಿ ಮಹಿಳೆಯರು ತಮ್ಮ ಮತ್ತು ಪತಿಯ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯ ವಿವರಗಳನ್ನು ಭರ್ತಿಮಾಡುವ ಜೊತೆಗೆ ಪ್ರತಿಗಳನ್ನು ಲಗತ್ತಿಸಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 08, 2023 11:43 AM