ಹಾಸನ: ಕಾಡಿನಿಂದ ಗ್ರಾಮದೊಳಗೆ ‘ಬೆಳಗಿನ ವಿಹಾರಕ್ಕೆ’ ಆಗಮಿಸಿದ ಒಂಟಿ ಸಲಗ ಭೀಮ; ದಿಕ್ಕಾಪಾಲಾಗಿ ಓಡಿದ ನಾಯಿ ಮತ್ತು ಹಸುಗಳು

|

Updated on: Oct 26, 2023 | 1:14 PM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ನಿಂತಿರುವುದನ್ನು ಸಹ ಕಾಣಬಹುದು. ಅದು ಪ್ರಾಯಶಃ ನೈಟ್ ಹಾಲ್ಟ್ ಬಸ್ ಆಗಿರುತತ್ತದೆ. ಆದು ಹೌದಾಗಿದ್ದರೆ ಅದರ ಚಾಲಕ ಮತ್ತು ನಿರ್ವಾಹಕ ಅದರಲ್ಲೇ ಮಲಗಿರುತ್ತಾರೆ. ಅದೃಷ್ಟವಶಾತ್ ಸಲಗ ಯಾರಿಗೂ ತೊಂದರೆ ಮಾಡದೆ ತನ್ನ ಪಾಡಿಗೆ ತಾನು ನಡೆದು ಹೋಗುತ್ತದೆ.

ಹಾಸನ: ಅತ್ತ ಮೈಸೂರಲ್ಲಿ ದಸರಾ ಮಹೋತ್ಸವಕ್ಕೆ ಶಿಬಿರಗಳಿಂದ ನಾಡಿಗೆ ಬಂದಿದ್ದ ಆನೆಗಳು ವಾಪಸ್ಸು ಹೊರಟಿದ್ದರೆ, ಇಲ್ಲಿ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಬೆಳ್ಳಬೆಳಗ್ಗೆ ಕಾಡಾನೆಯೊಂದು ಪ್ರತ್ಯಕ್ಷವಾಗಿ ಆಗಷ್ಟೇ ಎದ್ದು ಕಣ್ಣೊರಿಸಿಕೊಳ್ಳುತ್ತಾ ಮನೆಯಿಂದ ಹೊರಬಂದಿದ್ದ ಜನರಿಗೆ ಭೀತಿಗೊಳಪಡಿಸಿದೆ. ಅದು ಕಾಣುತ್ತಲೇ ಹಸು ಕರು ಮತ್ತು ನಾಯಿಗಳು ದಿಕ್ಕಾಪಾಲಾಗಿ ಓಡುವುದನ್ನು ಸಿಸಿಟಿವಿಗಳಲ್ಲಿ ಸೆರೆಯಾಗಿರುವ ಫುಟೇಜ್ ನಲ್ಲಿ ನೋಡಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ನಿಂತಿರುವುದನ್ನು ಸಹ ಕಾಣಬಹುದು. ಅದು ಪ್ರಾಯಶಃ ನೈಟ್ ಹಾಲ್ಟ್ ಬಸ್ ಆಗಿರುತತ್ತದೆ. ಆದು ಹೌದಾಗಿದ್ದರೆ ಅದರ ಚಾಲಕ ಮತ್ತು ನಿರ್ವಾಹಕ ಅದರಲ್ಲೇ ಮಲಗಿರುತ್ತಾರೆ. ಅದೃಷ್ಟವಶಾತ್ ಸಲಗ ಯಾರಿಗೂ ತೊಂದರೆ ಮಾಡದೆ ತನ್ನ ಪಾಡಿಗೆ ತಾನು ನಡೆದು ಹೋಗುತ್ತದೆ. ಈ ಆನೆಗೆ ಭೀಮ ಅಂತ ನಾಮಕರಣ ಮಾಡಲಾಗಿದೆಯಂತೆ. ಭೀಮನ ವರ್ತನೆ ಅಂದರೆ ಗಾಂಭೀರ್ಯತೆಯೊಂದಿಗೆ ನಿಧಾನವಾಗಿ ಊರೊಳಗೆ ನಡೆಯುತ್ತಾ ಬಂದು ಒಂದು ಸುತ್ತು ಹಾಕಿ ವಾಪಸ್ಸು ಹೋಗೋದನ್ನು ನೋಡಿದರೆ, ಕಾಡಿನಿಂದ ಊರೊಳಗೆ ಮಾರ್ನಿಂಗ್ ವಾಕ್ ಗೆ ಬಂದಂತೆ ಅನಿಸುತ್ತೆ! ಭೀಮ ಕಾಣುತ್ತಲೇ ಬಿದ್ದೆನೋ ಸತ್ತೆನೋ ಅಂತ ಓಡಿದ್ದ ಗ್ರಾಮದ ಸಾಕು ಪ್ರಾಣಿಗಳು ಅವನ ಬೆನ್ನು ಕಾಣುತ್ತಲೇ ತಾವಿದ್ದ ಸ್ಥಳಗಳಿಗೆ ವಾಪಸ್ಸಾಗುತ್ತವೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on