ಡಿಕೆ ಸಹೋದರರ ನಡುವೆ ಇರುವ ಭ್ರಾತೃಪ್ರೇಮ ನೋಡುಗರ ಮನಸ್ಸಿಗೆ ಮುದ ನೀಡುತ್ತದೆ!
ತಾವು ಹೇಳೋದು ಮುಗಿದ ಬಳಿಕ ಸುರೇಶ ಏಳುವ ಮೊದಲು ಅಣ್ಣನ ಮುಖವನ್ನೊಮ್ಮೆ ನೋಡುತ್ತಾರೆ, ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಂಡರೋ ಇಲ್ಲವೋ ಎಂಬ ಭಾವದಲ್ಲಿ!
ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೀತಾ ಬೆಳೀತಾ ದಾಯಾದಿಗಳು, ಅಣ್ಣ ನಮ್ಮವನಾದರೆ ಅತ್ತಿಗೆ ನಮ್ಮವಳೇ, ಅಕ್ಕ ಮಾಡೋದು ಗಂಡನಿಗೆ ಅಣ್ಣ ಮಾಡೋದು ಹೆಂಡತಿಗೆ, ಅಣ್ಣ ಮಣ್ಣು ಮಾಡಿದ ತಮ್ಮ ರೊಕ್ಕಾ ಮಾಡಿದ-ಹೀಗೆ ಬೆಳೆದ ನಂತರ ಅಣ್ಣತಮ್ಮಂದಿರ ನಡುವೆ ಬಾಲ್ಯದ ಪ್ರೀತಿ, ಮಮತೆ ಮತ್ತು ವಾತ್ಸಲ್ಯ ಉಳಿದಿರಲಾರದು ಅಂತ ಹೇಳಲು ನಮ್ಮ ಭಾಷೆಯಲ್ಲಿ ಹಲವಾರು ಗಾದೆಗಳಿವೆ. ಆದರೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಅವರ ಸಹೋದರ ಸಂಸದ ಡಿಕೆ ಸುರೇಶ (DK Suresh) ಅವರ ನಡುವೆ ಬಾಲ್ಯದ ಭ್ರಾತೃತ್ವ ಮತ್ತು ಪ್ರೀತಿ ಈಗಲೂ ಖಾಯಂ ಆಗಿದೆ ಮಾರಾಯ್ರೇ. ಈ ವಿಡಿಯೋ ನೋಡಿದರೆ ನಾವು ಹೇಳುತ್ತಿರುವುದು ಅರ್ಥವಾಗುತ್ತದೆ.
ಶಿವಕುಮಾರ ಮತ್ತು ಸುರೇಶ ವೇದಿಕೆಯ ಮೇಲೆ ಅಕ್ಕಪಕ್ಕ ಕೂತು ಯಾವುದೋ ವಿಷಯವನ್ನು ಚರ್ಚಿಸುತ್ತಿದ್ದಾರೆ. ಸುರೇಶ ಮಾತಾಡುತ್ತಿದ್ದಾರೆ ಮತ್ತು ಶಿವಕುಮಾರ ಕೇಳಿಸಿಕೊಳ್ಳುತ್ತಾ ಬರೆದುಕೊಳ್ಳುತ್ತಿದ್ದಾರೆ. ತಮ್ಮ ಹೇಳಿದ್ದನ್ನೇ ಅವರು ಪೇಪರ್ ನಲ್ಲಿ ನೋಟ್ ಮಾಡಿಕೊಳ್ಳುತ್ತಿದ್ದಾರೋ ಆಥವಾ ಬೇರೇನೋ ಬರೆಯುತ್ತಿದ್ದಾರೋ ಗೊತ್ತಿಲ್ಲ. ಆದರೆ ಸುರೇಶ ಹೇಳುತ್ತಿರುವುದನ್ನು ಶಿವಕುಮಾರ ಕೇಳಿಸಿಕೊಳ್ಳುತ್ತಿದ್ದಾರೆ ಮತ್ತು ಸರಿ ಎನ್ನುವಂತೆ ತಲೆದೂಗುತ್ತಿದ್ದಾರೆ.
ಶಿವಕುಮಾರ ಹಿಂದೆ ಕುಳಿತಿರುವ ವ್ಯಕ್ತಿಯೊಬ್ಬರು ಅವರೇನು ಬರದುಕೊಳ್ಳುತ್ತಿದ್ದಾರೆ ಅಂತ ನೋಡುವ ಪ್ರಯತ್ನವನ್ನು ಒಮ್ಮೆಯಲ್ಲ ಎರಡು ಬಾರಿ ಮಾಡುತ್ತಾರೆ! ತಾವು ಹೇಳೋದು ಮುಗಿದ ಬಳಿಕ ಸುರೇಶ ಏಳುವ ಮೊದಲು ಅಣ್ಣನ ಮುಖವನ್ನೊಮ್ಮೆ ನೋಡುತ್ತಾರೆ, ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಂಡರೋ ಇಲ್ಲವೋ ಎಂಬ ಭಾವದಲ್ಲಿ!
ಈ ಸನ್ನಿವೇಶ ನಮ್ಮ ಕೆಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಕೆಪಿಸಿಸಿಯ ಕಾರ್ಮಿಕ ಘಟಕ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಅನೇಕಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ. ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಸಭಿಕರನ್ನು ಉದ್ದೇಶಿಸಿ ಮಾತಾಡುತ್ತಿರುವುದು ಹಿನ್ನೆಲೆಯಲ್ಲಿ ಕೇಳಿಸುತ್ತದೆ.
ಇದನ್ನೂ ಓದಿ: ಪಿಎಸ್ ಐ ನೇಮಕಾತಿ ಹಗರಣದಲ್ಲಿ ಆರೋಪಿಯ ಮನೆಗೆ ಹೋಗಿದ್ದ ಗೃಹ ಸಚಿವರಿಗೆ ನೊಟೀಸ್ ನೀಡಿಲ್ಲ ಯಾಕೆ? ಡಿಕೆ ಶಿವಕುಮಾರ