ಸನ್ನಿವೇಶಕ್ಕೆ ತಕ್ಕಂತೆ ನಿಷ್ಠೆ ಬದಲಾಗಬಾರದು; ಎಸ್ ಟಿ ಸೋಮಶೇಖರ್ ಬಗ್ಗೆ ಈಗೇನೂ ಮಾತಾಡಲ್ಲ: ಸಿಟಿ ರವಿ, ಬಿಜೆಪಿ ನಾಯಕ

|

Updated on: Oct 06, 2023 | 12:08 PM

ಪಕ್ಷ ಅಧಿಕಾರದಲ್ಲಿರದ ಸಂದರ್ಭದಲ್ಲಿ ಪುನಃ ಕಾಂಗ್ರೆಸ್ ಕಡೆ ವಾಲಿರುವ ಎಸ್ ಟಿ ಸೋಮಶೇಖರ್ ಬಗ್ಗೆ ಮಾತಾಡುವಾಗ ರವಿ, ಶಾಸಕನ ಅಸಮಾಧಾನಕ್ಕೆ ಹಲವು ಕಾರಣಗಳಿರಬಹುದು, ಆದರೆ ಅವುಗಳನ್ನು ಚರ್ಚಿಸಲು ಇದು ಸೂಕ್ತ ಸಮಯವಲ್ಲ, ಸಮಯ ಬಂದಾಗ ಮಾತಾಡುವುದಾಗಿ ಹೇಳಿದರು.

ಚಿಕ್ಕಮಗಳೂರು: ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಶಾಸಕ ಸಿಟಿ ರವಿ (CT Ravi) ಇಂದು ನಗರದ ತಮ್ಮ ನಿವಾಸದಲ್ಲಿ ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಹಲವಾರು ವಿಷಯಗಳ ಬಗ್ಗೆ ಮಾತಾಡಿದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಮಂತ್ರಿ ಪದವಿಯನ್ನೂ ಅನುಭವಿಸಿ ಈಗ ಪಕ್ಷ ಅಧಿಕಾರದಲ್ಲಿರದ ಸಂದರ್ಭದಲ್ಲಿ ಪುನಃ ಕಾಂಗ್ರೆಸ್ ಕಡೆ ವಾಲಿರುವ ಯಶವಂತಪುರದ ಶಾಸಕ (Yashwanthpur MLA) ಎಸ್ ಟಿ ಸೋಮಶೇಖರ್ (ST Somashekar) ಬಗ್ಗೆ ಮಾತಾಡುವಾಗ ರವಿ, ಶಾಸಕನ ಅಸಮಾಧಾನಕ್ಕೆ ಹಲವು ಕಾರಣಗಳಿರಬಹುದು, ಆದರೆ ಅವುಗಳನ್ನು ಚರ್ಚಿಸಲು ಇದು ಸೂಕ್ತ ಸಮಯವಲ್ಲ, ಸಮಯ ಬಂದಾಗ ಮಾತಾಡುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಅವರು ನಿಷ್ಠೆ ಯಾವತ್ತೂ ಸಂದರ್ಭ ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಬದಲಾಬಾರದು ಅದು ಬದುಕಿನ ಜೀವಾಳವಾಗಿರಬೇಕು ಎಂದರು. ಸಂದರ್ಭಗಳೇ ಮನುಷ್ಯನ ವ್ಯಕ್ತಿತ್ವದ ಪರಿಚಯ ನೀಡುತ್ತವೆ ಎಂದ ರವಿ, ಸೋಮಶೇಖರ್ ಬಗ್ಗೆ ಸದ್ಯಕ್ಕೇನೂ ಮಾತಾಡಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ