ಮದ್ದೂರಿನಲ್ಲಿ ಕೇಸರಿ ರಣಕಹಳೆ: 28 ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಜನವೋ ಜನ
ಮೊನ್ನೆ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಕಲ್ಲು ತೂರಾಟ ಪ್ರಕರಣದ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯದ ಮದ್ದೂರಿನಲ್ಲಿವತ್ತು ಕೇಸರಿ ಪಡೆ ಗರ್ಜಿಸಿದೆ. ಮೊನ್ನೆಯಷ್ಟೇ ಒಂದು ಗಣೇಶ ಮೆರವಣಿಗೆಯನ್ನ ಅಡ್ಡಿಪಡಿಸಿದ್ದಕ್ಕೆ ಇವತ್ತು ಬರೋಬ್ಬರಿ 28 ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದು, ಮದ್ದೂರಿಗೆ ಮದ್ದೂರೇ ಕೇಸರಿಮಯವಾಗಿದೆ.
ಮಂಡ್ಯ, (ಸೆಪ್ಟೆಂಬರ್ 10): ಮೊನ್ನೆ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಕಲ್ಲು ತೂರಾಟ ಪ್ರಕರಣದ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯದ ಮದ್ದೂರಿನಲ್ಲಿವತ್ತು ಕೇಸರಿ ಪಡೆ ಗರ್ಜಿಸಿದೆ. ಮೊನ್ನೆಯಷ್ಟೇ ಒಂದು ಗಣೇಶ ಮೆರವಣಿಗೆಯನ್ನ ಅಡ್ಡಿಪಡಿಸಿದ್ದಕ್ಕೆ ಇವತ್ತು ಬರೋಬ್ಬರಿ 28 ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದು, ಮದ್ದೂರಿಗೆ ಮದ್ದೂರೇ ಕೇಸರಿಮಯವಾಗಿದೆ. ಇನ್ನು ಶಿಂಷಾ ನದಿಯತ್ತ ಸಾಗುತ್ತಿರುವ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರು ಶಾಲು ಬೀಸಿ, ಕುಣಿದು ಕುಪ್ಪಳಿಸುತ್ತಿದ್ದಾರೆ. ಇನ್ನೊಂದೆಡೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮದ್ದೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
