VIDEO: ಶಿವರಾಜ್ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು
ಮಡೆನೂರು ಮನು ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಅವರು ಅನೇಕ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಹೀಗಿರುವಾಗಲೇ ಮಡೆನೂರು ಮನು ಅವರು ಶಿವರಾಜ್ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ .
ಮಡೆನೂರು ಮನು (Madenuru Manu) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಇದಕ್ಕೆ ಕಾರಣ ಆಗಿದ್ದು ಅವರು ನಡೆದು ಕೊಂಡ ರೀತಿ. ಅವರು ಶಿವರಾಜ್ಕುಮಾರ್, ದರ್ಶನ್, ಧ್ರುವ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಹೇಳಿಕೆ ಬೆನ್ನಲ್ಲೇ ಧ್ರುವ ಸರ್ಜಾ ಬಳಿ ತೆರಳಿ ಅವರು ಕ್ಷಮೆ ಕೇಳಿದ್ದರು. ಈಗ ಶಿವರಾಜ್ಕುಮಾರ್ ಕಾಲಿಗೆ ಬಿದ್ದು ಮನು ಕ್ಷಮೆ ಕೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 25, 2025 04:22 PM
