ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!

Updated on: Dec 23, 2025 | 8:00 PM

ಮಧ್ಯಪ್ರದೇಶ ಸಚಿವೆಯೊಬ್ಬರು ಹೊಸದಾಗಿ ನಿರ್ಮಾಣವಾಗಿದ್ದ ರಸ್ತೆಯ ಪರಿಶೀಲನೆ ಮಾಡಲು ಹೋದಾಗ ಆ ರಸ್ತೆ ತಮ್ಮ ಚಪ್ಪಲಿಯ ಕೆಳಗೆ ಕಿತ್ತುಬಂದಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಹೊಸದಾಗಿ ನವೀಕರಿಸಿದ ಡಾಂಬರು ರಸ್ತೆ ಮೇಲೆ ಕಾಲಿಡುತ್ತಿದ್ದಂತೆ ಆ ಡಾಂಬರು ಅವರ ಚಪ್ಪಲಿಯ ಜೊತೆಗೇ ಕಿತ್ತು ಬಂದಿತು. ಇದರಿಂದ ಕೋಪಗೊಂಡ ಸಚಿವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾಲಿನ ಕೆಳಗೆ ಡಾಂಬರು ಕಿತ್ತು ಬರುತ್ತಿರುವ ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಭೋಪಾಲ್, ಡಿಸೆಂಬರ್ 23: ಮಧ್ಯಪ್ರದೇಶದ ರಾಯ್‌ಗಾಂವ್ ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ಸಚಿವೆ ಪ್ರತಿಮಾ ಬಾಗ್ರಿ ಅವರಿಗೆ ಆಘಾತ ಕಾದಿತ್ತು. ಹೊಸದಾಗಿ ನವೀಕರಿಸಿದ ಡಾಂಬರು ರಸ್ತೆ ಮೇಲೆ ಕಾಲಿಡುತ್ತಿದ್ದಂತೆ ಆ ಡಾಂಬರು ಅವರ ಚಪ್ಪಲಿಯ ಜೊತೆಗೇ ಕಿತ್ತು ಬಂದಿತು. ಇದರಿಂದ ಕೋಪಗೊಂಡ ಸಚಿವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾಲಿನ ಕೆಳಗೆ ಡಾಂಬರು ಕಿತ್ತು ಬರುತ್ತಿರುವ ಈ ಘಟನೆಯ ವಿಡಿಯೋ ವೈರಲ್ (Viral Video) ಆಗಿದೆ. ಈ ಕಾಮಗಾರಿ ಮಾಡಿದ ಗುತ್ತಿಗೆದಾರರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಲು ಮತ್ತು ಜವಾಬ್ದಾರಿಯುತ ಸಂಸ್ಥೆಯ ವಿರುದ್ಧ ಕಠಿಣ ದಂಡ ವಿಧಿಸಲು ಸಿವೆ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 23, 2025 07:56 PM