ರಾಜಕೀಯ ಅಂದರೇ ಸಿಡಿ ಹಿಡಿದುಕೊಂಡು ಓಡಾಡಿದಂತಲ್ಲ: ಸಿಪಿ ಯೋಗೇಶ್ವರ್​ಗೆ ಶಾಸಕ ಬಾಲಕೃಷ್ಣ ಟಾಂಗ್

| Updated By: ಗಂಗಾಧರ​ ಬ. ಸಾಬೋಜಿ

Updated on: Oct 09, 2023 | 9:02 PM

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬುರುಡೆ ರಾಜ. ಇಡೀ ರಾಜಕೀಯ ಜೀವನ ಬುರುಡೆ ಬಿಟ್ಕೊಂಡೇ ತಿರುಗಾಡಿದ್ದಾರೆ. ರಾಜಕೀಯ ಅಂದರೇ ಹೈಕಮಾಂಡ್ ಬಳಿ ಸಿಡಿ ಹಿಡಿದುಕೊಂಡು ಓಡಾಡಿದಂತೆ ಅಲ್ಲ ಎಂದು ಮಾಗಡಿ ಶಾಸಕ ಬಾಲಕೃಷ್ಣ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು, ಅಕ್ಟೋಬರ್​​ 09: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ಬುರುಡೆ ರಾಜ. ರಾಜಕೀಯ ಅಂದರೇ ಹೈಕಮಾಂಡ್ ಬಳಿ ಸಿಡಿ ಹಿಡಿದುಕೊಂಡು ಓಡಾಡಿದಂತೆ ಅಲ್ಲ ಎಂದು ಮಾಗಡಿ ಶಾಸಕ ಬಾಲಕೃಷ್ಣ ವಾಗ್ದಾಳಿ ಮಾಡಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮೊದಲು ಬರೋದಕ್ಕೆ ಹೇಳಿ. ಇಡೀ ರಾಜಕೀಯ ಜೀವನ ಬುರುಡೆ ಬಿಟ್ಕೊಂಡೇ ತಿರುಗಾಡಿದವನು. ಈಗ ಕಾಂಗ್ರೆಸ್ ಮುಗಿಸ್ತೀವಿ ಅಂತ ಜೆಡಿಎಸ್, ಬಿಜೆಪಿ ಒಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಮಂತ್ರಿ ಮಾಡಿದ ಯಡಿಯೂರಪ್ಪರನ್ನೇ ಕೆಳಗೆ ಇಳಿಸಿದವರಲ್ವಾ? ಹೆಚ್​ಡಿ ಕುಮಾರಸ್ವಾಮಿ ಮೈತ್ರಿ ಸರ್ಕಾರ ಬೀಳಿಸಿದವರು ಯೋಗೇಶ್ವರ್ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ನಾವಾಗಿದ್ದರೆ ಜೀವನ ಪರ್ಯಂತ ಇವರ ನೆರಳನ್ನೂ ತುಳಿಯುತ್ತಿರಲಿಲ್ಲ. ರಾಜಕೀಯಗೋಸ್ಕರ ಯೋಗೇಶ್ವರ್ ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.