ಜಾತಿ ಗಣತಿ ವರದಿ 2017ರಲ್ಲೇ ತಯಾರಾದರೂ  ಯಾಕೆ ಸಾರ್ವಜನಿಕಗೊಳಿಸಿಲ್ಲ ಅಂತ ಸರ್ಕಾರದಲ್ಲಿದ್ದವರನ್ನು ಕೇಳಬೇಕು: ಬಿಕೆ ಹರಿಪ್ರಸಾದ್

ವರದಿಯಲ್ಲಿ ತಪ್ಪು-ಒಪ್ಪುಗಳಿರುತ್ತವೆ ಎಂದರು. ಆದರೆ ಅವುಗಳನ್ನು ಚರ್ಚೆ ನಡೆಸಿ ತಿದ್ದುಪಡಿಗಳ ಮೂಲಕ ಸರಿಪಡಿಸಬಹುದು, ಅದೇನೂ ದೊಡ್ಡ ವಿಷಯವಲ್ಲ ಎಂದ ಅವರು ಅದನ್ನು ಸಾರ್ವಜನಿಕಗೊಳಿಸದಿರುವುದು ತಪ್ಪು ಎಂದು ಹೇಳಿದರು. ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ಜಾತಿಗಣತಿ ಬಗ್ಗೆ ಚರ್ಚೆಯಾಯಿತೇ ಅಂತ ಕೇಳಿದಾಗ ಚರ್ಚೆ ಆಗಲಿಲ್ಲ ಆದರೆ ಮುಖ್ಯಮಂತ್ರಿಗಳು ವರದಿ ರೆಡಿಯಿದೆ ಅಂತ ಸಭೆಗೆ ತಿಳಿಸಿದರು ಎಂದು ಹರಿಪ್ರಸಾದ್ ಹೇಳಿದರು.     

ಜಾತಿ ಗಣತಿ ವರದಿ 2017ರಲ್ಲೇ ತಯಾರಾದರೂ  ಯಾಕೆ ಸಾರ್ವಜನಿಕಗೊಳಿಸಿಲ್ಲ ಅಂತ ಸರ್ಕಾರದಲ್ಲಿದ್ದವರನ್ನು ಕೇಳಬೇಕು: ಬಿಕೆ ಹರಿಪ್ರಸಾದ್
|

Updated on: Oct 09, 2023 | 7:32 PM

ದೆಹಲಿ: ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಪಕ್ಷದ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ಜಾತಿ ಗಣತಿ (caste census) ಬಗ್ಗೆ ಮಾತಾಡಿದರು. 2013 ರಲ್ಲಿ ಜಾತಿ ಗಣತಿ ನಡೆಸಲು ಕಾಂತರಾಜ್ ಆಯೋಗವನ್ನು (Kantharaj Commission) ನೇಮಿಸಲಾಗಿತ್ತು ಮತ್ತು ಆಯೋಗವು 2017 ರಲ್ಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಅದನ್ನು ಯಾಕೆ ಸಾರ್ವಜನಿಕಗೊಳಿಸಲಿಲ್ಲ ಅಂತ ಸರ್ಕಾರದಲ್ಲಿರುವವರನ್ನೇ ಕೇಳಬೇಕು ಎಂದು ಹರಿಪ್ರಸಾದ್ ಹೇಳಿದರು. ಜಾತಿ ಗಣತಿಯನ್ನು ಸಾರ್ವಜನಿಕಗೊಳಿಸಿದಂತೆ ಯಾವುದಾದರೂ ಸಮುದಾಯದ ಒತ್ತಡವಿದೆಯಾ ಅಂತ ಕೇಳಿದ ಪ್ರಶ್ನೆಗೆ ಅವರು, ಜಾತಿ ಗಣತಿ ಎಲ್ಲ ಸಮುದಾಯಗಳನ್ನು ಸಂತೃಪ್ತಿಪಡಿಸಲಾಗದು. ವರದಿಯಲ್ಲಿ ತಪ್ಪು-ಒಪ್ಪುಗಳಿರುತ್ತವೆ ಎಂದರು. ಆದರೆ ಅವುಗಳನ್ನು ಚರ್ಚೆ ನಡೆಸಿ ತಿದ್ದುಪಡಿಗಳ ಮೂಲಕ ಸರಿಪಡಿಸಬಹುದು, ಅದೇನೂ ದೊಡ್ಡ ವಿಷಯವಲ್ಲ ಎಂದ ಅವರು ಅದನ್ನು ಸಾರ್ವಜನಿಕಗೊಳಿಸದಿರುವುದು ತಪ್ಪು ಎಂದು ಹೇಳಿದರು. ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ಜಾತಿಗಣತಿ ಬಗ್ಗೆ ಚರ್ಚೆಯಾಯಿತೇ ಅಂತ ಕೇಳಿದಾಗ ಚರ್ಚೆ ಆಗಲಿಲ್ಲ ಆದರೆ ಮುಖ್ಯಮಂತ್ರಿಗಳು ವರದಿ ರೆಡಿಯಿದೆ ಅಂತ ಸಭೆಗೆ ತಿಳಿಸಿದರು ಎಂದು ಹರಿಪ್ರಸಾದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ