ಸಿಎಂ ಸಿದ್ದರಾಮಯ್ಯ ಮೇಲಿನ ಅಸಮಾಧಾನ ಮರೆತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅದು ಮುಗಿದುಹೋದ ಕತೆ ಅಂದರು!
ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗ್ತೀರಾ ಅಂತ ಕೇಳಿದರೆ, ಯಾವಾಗಲೂ ಭೇಟಿಯಾಗುವ ಹಾಗೆ ಭೇಟಿಯಾಗ್ತೀನಿ ಅದರಲ್ಲೇನು ವಿಶೇಷ ಎನ್ನುತ್ತಾರೆ. ಅವರ ಮಗ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ರದ್ದಾಗಿರುವ ಬಗ್ಗೆ ಕೇಳಿದರೆ ಹೋಗಿ ಅವ್ರನ್ನೇ ಕೇಳು ನನ್ನೇನು ಕೇಳ್ತಿಯಾ ಅನ್ನುತ್ತಾರೆ!
ದಾವಣಗೆರೆ: ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೇಲಿದ್ದ ಮುನಿಸು, ಅಸಮಾಧಾನ ಕೋಪ-ತಾಪ ಮುಗಿದಂತಿದೆ ಮಾರಾಯ್ರೇ! ಇಂದು ನಗರದಿಂದ ಬೆಂಗಳೂರಿಗೆ ಹೊರಡುವ ಮೊದಲು ಸುದ್ದಿಗಾರರೊಂದಿಗೆ ಮಾತಾಡಿದ ಅವರು ವಿಷಯಕ್ಕೆ ಸಂಬಂಧಿಸಿದ ಒಂದೇಒಂದು ಪ್ರಶ್ನೆ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಅದೆಲ್ಲ ಮುಗಿದು ಹೋದ ಕತೆ, ಮಾತಾಡುವ ಅವಶ್ಯಕತೆಯಿಲ್ಲ ಎಂದು ಅವರು ಕೇಳಿದ ಪ್ರಶ್ನೆಗಳಿಗೆ ಚುಟುಕಿನಲ್ಲಿ ಉತ್ತರ ನೀಡಿದರು. ಅವರು ಮಾತಾಡೋದೇ ಹಾಗೆ, ಗದರಿದಂತೆ! ಅವರನ್ನು ಸಮಾಧಾನಪಡಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ (Eshwar Khandre) ಬಂದು ಹೋದ ಬಗ್ಗೆ ಕೇಳಿದರೆ ಅವರು ಮತ್ತಷ್ಟು ಸಿಡುಕಿ, ಅದು ಮುಗಿದು ಹೋದ ಕತೆ ಅಂತ ಹೇಳಿದ್ದೀನಲ್ಲಯ್ಯ, ಆದೇನ್ ಕೇಳಿದ್ದನ್ನೇ ಪದೇಪದೆ ಕೇಳ್ತಿಯಾ ಅಂತ ರೇಗಿದರು. ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗ್ತೀರಾ ಅಂತ ಕೇಳಿದರೆ, ಯಾವಾಗಲೂ ಭೇಟಿಯಾಗುವ ಹಾಗೆ ಭೇಟಿಯಾಗ್ತೀನಿ ಅದರಲ್ಲೇನು ವಿಶೇಷ ಎನ್ನುತ್ತಾರೆ. ಅವರ ಮಗ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ರದ್ದಾಗಿರುವ ಬಗ್ಗೆ ಕೇಳಿದರೆ ಹೋಗಿ ಅವ್ರನ್ನೇ ಕೇಳು ನನ್ನೇನು ಕೇಳ್ತಿಯಾ ಅನ್ನುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ